ಲಾಕ್ ಡೌನ್ ಹಿನ್ನೆಲೆಯಲ್ಲಿ ಹೊಟ್ಟೆಹಸಿವಿನಿಂದ ಕಂಗೆಟ್ಟು ದಾಳಿ ಮಾಡುವ ಬೀದಿ ನಾಯಿಗಳ ಹೊಟ್ಟೆ ಹೊರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಬೀದಿ ನಾಯಿಗಳಿಗಾಗಿ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದೆ.
ಬೀದಿ ನಾಯಿಗಳ ಹೊಟ್ಟೆ ಹೊರೆಯಲು ಬಿಬಿಎಂಪಿ ನಗರದಲ್ಲಿನ ಸುಮಾರು 3 ಲಕ್ಷ ಬೀದಿ ನಾಯಿಗಳಿಗೆ ಹೊಟ್ಟೆ ತುಂಬಿಸಲು 16 ಲಕ್ಷ ರೂ. ಮೀಸಲಿಟ್ಟಿದೆ.
ಬಿಬಿಎಂಪಿಯ ಹೊಸ ಪ್ರಸ್ತಾಪಕ್ಕೆ ನಗರಾಬಿವೃದ್ಧಿ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಸುಮಾರು 70 ದಿನಗಳ ಕಾಲ ಬೀದಿನಾಯಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು.
ನಗರದಲ್ಲಿ ಸುಮಾರು 3 ಲಕ್ಷ ನಾಯಿಗಳಿದೆ ಎಂದು ಅಂದಾಜಿಸಲಾಗಿದ್ದು, ಇದರಲ್ಲಿ ಸುಮಾರು 50,000 ಸಾವಿರ ನಾಯಿಗಳು ಬೇಕರಿ, ಹೋಟೆಲ್, ಮನೆಗಳ ಊಟವನ್ನು ಮಾಡುತ್ತಿದೆ. ಇನ್ನುಳಿದ ನಾಯಿಗಳಿಗೆ ದಿನಕ್ಕೆ 6 ರೂಪಾಯಿಯಂತೆ ಆಹಾರದ ವ್ಯವಸ್ಥೆ ಮಾಡಲಾಗುವುದು.