ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡದ ಮಾರ್ಗದರ್ಶಕರಾಗಿ ಬಿಸಿಸಿಐ ಮಹೇಂದ್ರ ಸಿಂಗ್ ಧೋನಿಯನ್ನು ನೇಮಿಸಿದ್ದು ಈಗ ವಿವಾದಕ್ಕೆ ತಿರುಗಿದೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗೆ ಬಂದ ದೂರಿನಲ್ಲಿ ಭಾರತ ತಂಡದ ಮಾಜಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ವಿರುದ್ಧ ಲಾಭದಾಯಕ ಹುದ್ದೆ ಹೊಂದಿದ್ದು, ಇದು ನಿಯಮ ಬಾಹಿರ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶ ಕ್ರಿಕೆಟ್ ಮಂಡಳಿ ಸದಸ್ಯ ಸಂಜೀವ್ ಗುಪ್ತ ಲೋಧಾ ಸಮಿತಿ ನಿಯಮಗಳ ಪ್ರಕಾರ ಧೋನಿ ನೇಮಕ ಕಾನೂನು ಬಾಹಿರವಾಗಿದ್ದು, ಧೋನಿ ಲಾಭದಾಯಕ ಹುದ್ದೆ ಹೊಂದಿರುವುದರಿಂದ ಭಾರತ ತಂಡದ ಮಾರ್ಗದರ್ಶಿಯಾಗಿ ಹೇಗೆ ನೇಮಕಗೊಳಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.