ಬೆಳಗಾವಿ : ಹೊರ ರಾಜ್ಯದಿಂದ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಸ್ಥಳದಲ್ಲಿಯೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈಲಹೊಂಗಲ ತಾಲ್ಲೂಕಿನ ವನ್ನೂರಿನ ಮಾರುತಿ ಬಾಳಪ್ಪ ಕಳಗೇರಿ(30), ಹುಕ್ಕೇರಿ ತಾಲ್ಲೂಕಿನ ಹುಲ್ಲೋಳಿ ಗ್ರಾಮದ ಸಿದ್ದಪ್ಪ ಪುಂಡಲೀಲ ಜೌಗಲಾ(33) ಎಂದು ತಿಳಿದು ಬಂದಿದೆ.
ಸದಾಶಿವ ನಗರದಲ್ಲಿ ಒಂಟಿ ಮಹಿಳೆ ಹೆಸರಲ್ಲಿ ಮನೆ ಮಾಡಿದ್ದ ಆರೋಪಿಗಳು, ಹೊರರಾಜ್ಯದಿಂದ ಮಹಿಳೆಯರನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬಂಧಿತರಿಬ್ಬರು ಗಿರಾಕಿಗಳನ್ನು ಬುಕ್ ಮಾಡಿ, ಬಳಿಕ ಮಹಿಳೆ ಹೆಸರಲ್ಲಿ ಮಾಡಿದ ಮನೆಗೆ ಕರೆಸಿಕೊಂಡು ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.