ಬೆಳಗಾವಿ : ದುಡುಕಿನ ನಿರ್ಧಾರದಿಂದ ದಂಪತಿಗಳು ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು ರೈಲಿಗೆ ತಲೆ ಕೊಟ್ಟ ಪರಿಣಾಮ ಪತಿ ಸಾವನ್ನಪ್ಪಿದ್ದು, ತೀವ್ರ ಗಾಯಗೊಂಡ ಪತ್ನಿ ಆಸ್ಪತ್ರೆ ಸೇರಿದ್ದಾರೆ.
ಬೆಳಗಾವಿಯ 1. ನೇ ರೈಲ್ವೆ ಗೇಟ್ ಬಳಿ ಕೌಟುಂಬಿಕ ಕಲಹದಿಂದಾಗಿ ಬುಧವಾರ ತಡ ರಾತ್ರಿ ದಂಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪತಿ ಸಾವನ್ನಪ್ಪಿದ್ದು, ಪತ್ನಿ ಗಂಭೀರ ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ರಾಕೇಶ್ ಪಾಟೀಲ ಗುರುತಿಸಲಾಗಿದ್ದು, ಮೃತಪಟ್ಟ ವ್ಯಕ್ತಿ ಮರಾಠಿ ದಿನಪತ್ರಿಕೆಯ ಮುದ್ರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿ ದಂಪತಿಗಳು ಜಗಳವಾಡಿದ್ದಾರೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ನಗರದ 1ನೇ ರೈಲ್ವೆ ಗೇಟ್ ಬಳಿ ತೆರಳಿದ್ದಾರೆ.
ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ಘಟನೆಯಲ್ಲಿ ರಾಕೇಶ್ ಮೃತಪಟ್ಟಿದ್ದಾನೆ. ಅಸ್ಮಿತಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.