ಕಾಲೋನಿ ಜನರಿಂದ ಬಹಿಷ್ಕಾರಕ್ಕೊಳಗಾದರೂ ಮಹಾಮಾರಿ ಕೋವಿಡ್ ನಿಂದ ಮೃತಪಟ್ಟ ಹೆಂಡತಿ, ಮಕ್ಕಳು ಸಂಬಂಧಿಗಳಿಗೆ ಬೇಡವಾದ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ ಧರ್ಮದ ಪದ್ಧತಿಯಂತೆ ಶಾಸ್ತ್ರೋಸ್ತ್ರವಾಗಿ ಅಂತ್ಯ ಸಂಸ್ಕಾರ ನೀಡುವ ಮೂಲಕ 450ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ತೆರೆ ಮರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಇದೇ ಇವತ್ತಿನ ವಿಷೇಶ ವಿರಬಾಹು.
ಹೀಗೆ ಕಟ್ಟಿಗಳನ್ನ ಚಿತಾಗಾರದಲ್ಲಿ ಮಟ್ಟಸವಾಗಿ ಜೋಡಿಸಿ ಅಂತ್ಯಕ್ರಿಯೆಗೆ ಸಿದ್ದಪಡಿಸಿಕೊಳ್ಳುತ್ತಿರುವ ವ್ಯೆಕ್ತಿಯ ಹೆಸರು ಹುಲುಗಪ್ಪ ಬಳ್ಳಾರಿ ನಗರದ ಹರಿಶ್ಚಂದ್ರ ಘಾಟ್ ನ ಚಿತಾಗಾರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಶವಗಳನ್ನ ದಹನ ಮಾಡುವ ಕಾಯಕವನ್ನ ಅಂತ್ಯಂತ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದಾನೆ.
ಕೋವಿಡ್ ನಿಂದಾಗಿ ಬಳ್ಳಾರಿ ನಗರ ದೇಶದೆಲ್ಲೆಡೆ ಖುಖ್ಯಾತಿ ಪಡೆದು ಸರಣಿಯ ಸಾವುಗಳು ಸಂಭವಿಸುತ್ತಿದ್ದರೆ, ಕುಟುಂಬದವರಿಗೆ ಬೇಡವಾದ ಹತ್ತರ. ಹತ್ತಿರ 450ಕ್ಕೂ ಹೆಚ್ಚು ಶವಗಳನ್ನ ಅವರದೇ ಪದ್ದತಿಯಲ್ಲಿ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಅಷ್ಟೆ ಅಲ್ಲ ಸಂಸ್ಕಾರ ಮಾಡಿದ ಶವಗಳ ಹೆಸರು. ನಂಬರ್ ಹಾಕಿ ಅಸ್ತಿಗಳನ್ನ ಸಂಗ್ರಹಿಸಿ ವಾರಸುದಾರರಿಗೆ ನೀಡುವ ಕೆಲಸ ಮಾಡಿದ್ದಾನೆ.
ಇಂತಹ ಹುಲುಗಪ್ಪನಿಗೆ ಕೋವಿಡ್ ಸೊಂಕಿತರ ಶವಗಳನ್ನ ಸುಡುತ್ತಾರೆ ಅನ್ನೊ ಕಾರಣಕ್ಕೆ ಬಾಡಿಗೆ ಮನೆಯಿಂದ ಸಾಮಾನು ಹೊರ ಹಾಕಿ ಮನೆ ಖಾಲಿ ಮಾಡಿಸಿದ್ದಾರೆ.ಧಮ್ಕಿ ಹಾಕಿದ್ದಾರೆ ಇಷ್ಟಾದ್ರೂ ಛಲ ಬಿಡದ ಹುಲುಗಪ್ಪ ಇಂತಹ ಅವಕಾಶ ದೊರೆತಿದ್ದು ನನ್ನ ಜೀವನದ ಪುಣ್ಯ ಅಂತಾ ಭಾವಿಸಿದ್ದೇನೆ ಅಂತಾ ಗದ್ಗದಿತರಾಗುತ್ತಾರೆ.
ತಂದೆ ಸತ್ತರೆ ಮಗ ಬರುತ್ತಿರಲಿಲ್ಲ. ಗಂಡ ಸತ್ತರೆ ಹೆಂಡತಿ ಬರುತ್ತಿರಲಿಲ್ಲ ಅಲ್ಲೆ ಅಂಬ್ಯುಲೆನ್ಸ್ ನಲ್ಲೆ ಟಾಟಾ ಬೈ ಬೈ ಹೇಳಿ ಕಳಿಸಿಬಿಡುತ್ತಿದ್ದರು.ಹಾಗೆ ಬಂದ ಶವವನ್ನ ಇಳಿಸಿಕೊಂಡು ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮಾಡುವುದು ಸವಾಲೇ ಸರಿ ಕೆಲವೊಮ್ಮೆ ಎಂಟು ಶವಗಳನ್ನಷ್ಟೆ ಸುಡುವ ಅವಕಾಶವಿರುವ ಜಾಗದಲ್ಲಿ ಹದಿನಾರು ಶವಗಳು ಬರುತ್ತಿದ್ದವು. ಅದರೂ ರಾತ್ರಿ 12 ಗಂಟೆವರೆಗೆ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುತ್ತಿದ್ದ.
ಇತ್ತ ಸ್ಮಶಾನದ ಕಡೆ ಶವ ಬಂದರೆ ಜನರು ಸಂಸ್ಕಾರ ಮಾಡದಂತೆ ಗಲಾಟೆ ಮಾಡಿದಾಗ್ಲೂ ಅಂಜದೆ.ಅಳುಕದೆ ತನಗೆ ಸೊಂಕು ಬಂದಿತೆಂಬ ಬಗ್ಗೆ ಅಲೋಚನೆ ಮಾಡದೆ ಕಾಯಕದಲ್ಲಿ ತೊಡಗುತ್ತಿದ್ದ.
ಮನುಷ್ಯರು ಸಂಬಂಧಗಳು ಮೌಲ್ಯಗಳನ್ನ ಮರೆತಿರುವ ದಿನಮಾನಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಶವಗಳಿಗೆ ಮುಕ್ತಿ ಕೊಡುಮೂಲಕ ಬಡವನಗಿದ್ದರೂ ಹೃದಯ ಶ್ರೀಮಂತಿಕೆಯನ್ನ ಮರೆದಿರುವ ಹುಲುಗಪ್ಪನ ಸಹಾಯಕ್ಕೆ ಜಿಲ್ಲಾಡಳಿತ.ಅಥವಾ ಸಂಘ ಸಂಸ್ಥೆಗಳು ಗಳು ದಾವಿಸಬೇಕಿದೆ.
ನಾಗರಾಜ್.ಎಸ್.ರಾಜ್ ನ್ಯೂಸ್.ಬಳ್ಳಾರಿ