ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಬ್ಬಿದ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸಜೀವದಹನಗೊಂಡ ಆಘಾತಕಾರಿ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ದೇವರಚಿಕ್ಕನಹಹಳ್ಳಿಯ ಅಶ್ರೀತ್ ಅಪಾರ್ಟ್ ಮೆಂಟ್ ನಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಮೂರು ಫ್ಲ್ಯಾಟ್ ಗೆ ಹಚ್ಚಿದ್ದು, ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ.
ಸಿಲಿಂಡರ್ ಸ್ಫೋಟದಿಂದ ಅಪಾರ್ಟ್ ಮೆಂಟ್ ಗೆ ಅಳವಡಿಸಲಾಗಿದ್ದ ಗ್ಯಾಸ್ ಪೈಪ್ ಲೈನ್ ಗೆ ಬೆಂಕಿ ತಗುಲಿದ್ದರಿಂದ ಮೂರು ಮಹಡಿಯ ನಾಲ್ಕು ಫ್ಲ್ಯಾಟ್ ಗಳಿಗೆ ಬೆಂಕಿ ತಗುಲಿದ್ದು, ಇತರೆ ಮನೆಗಳಲ್ಲಿ ಸಿಲುಕಿದ್ದ ಜನರು ಹೊರಬರಲು ಪರದಾಡುತ್ತಿದ್ದಾರೆ.