ಬೆಂಗಳೂರಿನ ಚಾಮರಾಜಪೇಟೆಯ ತರಗುಪೇಟೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣದಲ್ಲಿ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮೃತಪಟ್ಟ ಮೂವರ ದೇಹಗಳು ಛಿದ್ರಗೊಂಡು ರಸ್ತೆಗೆ ಬಂದು ಬಿದ್ದಿವೆ.
ನ್ಯೂ ತರಗುಪೇಟೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಭೂಕಂಪನದ ಅನುಭವ ಉಂಟಾಗಿದೆ. ಮೃತಪಟ್ಟವರ ದೇಹಗಳು ಗೋದಾಮಿಯಿಂದ ಸುಮಾರು 3 ಮೀ.ದೂರದವರೆಗೆ ಹಾರಿ ರಸ್ತೆ ಬಂದು ಬಿದ್ದಿವೆ.
ಮೃತರು ಉತ್ತರ ಪ್ರದೇಶ ಮೂಲದವರು ಎಂದು ಹೇಳಲಾಗಿದ್ದು, ಮೂರು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಸ್ಫೋಟಕ್ಕೆ ಗ್ಯಾಸ್ ಸಿಲಿಂಡರ್ ಕಾರಣ ಎಂದು ಆರಂಭದಲ್ಲಿ ಹೇಳಲಾಗಿದ್ದರೂ ಪಕ್ಕದ ಅಂಗಡಿಯಲ್ಲಿ ಪಟಾಕಿ ಗೋದಾಮು ಇದ್ದು, ಅಲ್ಲಿ ಸ್ಫೋಟವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಪಂಚರ್ ಅಂಗಡಿಯ ಸಿಲಿಂಡರ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.