ಚಿನ್ನದ ಬೆಲೆಯಲ್ಲಿ ಗರಿಷ್ಠ ಬೆಲೆ ಇಳಿಕೆ:

ನವದೆಹಲಿ : ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಹಾಗೂ ಚಿನ್ನದ ಮೇಲಿನ ಆಮದು ಸುಂಕ ಕಡಿತದ ಹಿನ್ನೆಲೆಯಲ್ಲಿ ಚಿನ್ನದ ಆಭರಣಗಳ ಬೆಲೆಯು ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿದೆ.
10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು 2500 ರೂಪಾಯಿ ಇಳಿಕೆ ಕಂಡಿದೆ. ಚಿನ್ನದ ದರ ಶೇ.0.86ರಷ್ಟು ಕುಸಿತ ಕಂಡು, 10 ಗ್ರಾಂಗೆ 47,340 ರೂಪಾಯಿಗಳಿಗೆ ಕುಸಿದಿದೆ. ಬೆಳ್ಳಿ ಬೆಲೆ ಯೂ ಸಹ 6,500 ರೂಪಾಯಿಗಳಿಗೆ ಕುಸಿದಿದ್ದು, ಪ್ರತಿ ಕಿಲೋಗ್ರಾಂಗೆ 67,840 ರೂಪಾಯಿಗಳಿಗೆ ಇಳಿದಿದೆ.
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಆಮದು ಸುಂಕವನ್ನು ಶೇ. 12.5 ಇದರಿಂದ ಶೇ. 7.5 ರಷ್ಟು ಕಡಿತಗೊಳಿಸಿದೆ. ಇದಾದ ನಂತರ ಚಿನ್ನದ ದರ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ 44,350 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 48,380 ರೂ. ಇದೆ.