ಬೆಂಗಳೂರು : ಉದ್ಯಾನ ನಗರಿಯನ್ನು ಮತ್ತಷ್ಟು ಸುಂದರಗೊಳಿಸಲು ಬಿಬಿಎಂಪಿ ಹೆಜ್ಜೆಯಿಟ್ಟಿದ್ದು, ಸಿಲಿಕಾನ್ ಸಿಟಿಯಲ್ಲಿ ಇನ್ನು ಮುಂದೆ ಸಿಕ್ಕ ಸಿಕ್ಕ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ, ಮಲ, ಮೂತ್ರ ವಿಸರ್ಜನೆ ಮಾಡಿದರೆ ಶಿಕ್ಷೆ ಜೊತೆಗೆ ದಂಡ ಪಕ್ಕಾ ಆಗಲಿದೆ.
ರಾಜ್ಯದ ರಾಜಧಾನಿಯನ್ನು ಸ್ವಚ್ಛಂದ ನಗರವನ್ನಾಗಿಸುವಂತ ನಿಟ್ಟಿನಲ್ಲಿ ಬಿಬಿಎಂಪಿ ಹೆಜ್ಜೆ ಇರಿಸಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಪ್ರಾರಂಭಿಸಲಾಗುತ್ತಿದೆ. ಇದರ ಭಾಗವಾಗಿ ನಗರದ ವ್ಯಾಪ್ತಿಯಲ್ಲಿ ತೆರದ ಪ್ರದೇಶದಲ್ಲಿ ಕಸ, ಮಲಮುಕ್ತ ವಿಸರ್ಜನೆ ಬ್ರೇಕ್ ಹಾಕಿದೆ. ಇನ್ನು ಮುಂದೆ ಹೀಗೆ ಮಾಡಿದ್ರೇ ದಂಡದ ಜೊತೆಗೆ ಶಿಕ್ಷೆ ಫಿಕ್ಸ್ ಎಂಬುದಾಗಿ ಬಿಬಿಎಂಪಿ ತಿಳಿಸಿದೆ.
ಈ ಕುರಿತಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವಂತ ಬಿಬಿಎಂಪಿ ಸ್ವಚ್ಛ ಭಾರತ್ ಮಿಷನ್ ಭಾರತ ಸರ್ಕಾರದ ರಾಷ್ಟ್ರೀಯ ಪ್ರಮುಖ ಕಾರ್ಯಕ್ರಮವಾಗಿದೆ. ಎಸ್ ಬಿ ಎಂ (ನಗರ) ಅನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ(ಮೊಹುವಾ) ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ. ಬಿಬಿಎಂಪಿ ಇತ್ತೀಚೆಗೆ ತನ್ನ ಎಸ್ ಡ ಬ್ಲ್ಯೂ ಎಂ ಕಾನೂನುಗಳನ್ವಯ (ಕರಡು) ತಿಳಿಸಿದೆ. ಇದರಲ್ಲಿ ಎಸ್ ಡ ಬ್ಲ್ಯೂ ಎಂ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧಗಳಿಗೆ ದಂಡವನ್ನು ವಿಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ತೆರೆದ ಪ್ರದೇಶದಲ್ಲಿ ಕಸ, ಮಲ ಮುಕ್ತ ವಿಸರ್ಜನೆ ಮತ್ತು ತೆರೆದ ಮೂತ್ರ ವಿಸರ್ಜನೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಬಿಬಿಎಂಪಿ ಈ ಮೂಲಕ ಘೋಷಿಸಲಾಗಿದೆ. ಈ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಯಾವುದೇ ವ್ಯಕ್ತಿ, ಸಂಸ್ಥೆ, ಗುತ್ತಿಗೆದಾರರ, ಆಪರೇಟರ್, ಇತ್ಯಾದಿಗಳಿಗೆ ಬಿಬಿಎಂಪಿ ಕಾನೂನುಗಳು, ಷೆಡ್ಯೂಲ್ 7 ಪ್ರಕಾರ ದಂಡ ವಿಧಿಸಲಾಗುತ್ತದೆ.
ಕಸ ಹಾಕುವುದು – ಮೊದಲ ಅಪರಾಧಕ್ಕೆ ರೂ.500, ಎರಡನೇ ಮತ್ತು ನಂತ್ರದ ಅಪರಾಧಕ್ಕೆ ರೂ.1,000. ಬಯಲು ಮಲ ವಿಸರ್ಜನೆ – ಮೊದಲ ಅಪರಾಧಕ್ಕೆ ರೂ.500, ಎರಡನೇ ಮತ್ತು ನಂತ್ರದ ಅಪರಾಧಕ್ಕೆ ರೂ.1,000 ಬಯಲು ಮೂತ್ರ ವಿಸರ್ಜನೆ – ಮೊದಲ ಅಪರಾಧಕ್ಕೆ ರೂ.500, ಎರಡನೇ ಮತ್ತು ನಂತ್ರದ ಅಪರಾಧಕ್ಕೆ ರೂ.1,000 ದಂಡ ವಿಧಿಸಲಾಗುವುದು ಎಂದಿದ್ದಾರೆ.