ಥಿಯೇಟರ್ ನತ್ತ ಸುಳಿಯದ ಪ್ರೇಕ್ಷಕರು: ಆತಂಕದಲ್ಲಿ ಸ್ಯಾಂಡಲ್ ವುಡ್

ಬೆಂಗಳೂರು : ಚನಲಚಿತ್ರ ವಾಣಿಜ್ಯ ಮಂಡಳಿ ಹಾಗೂ ನಟರ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶವನ್ನು ನೀಡಿದೆ, ಆದರೆ, ಥಿಯೇಟರ್ ನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಮನಸ್ಸು ಮಾಡದ್ದಕ್ಕೆ ಸ್ಯಾಂಡಲ್ ವುಡ್ ಮಂದಿ ಆತಂಕದಲ್ಲಿದ್ದಾರೆ.
ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರದೇ ಇರುವುದಕ್ಕೆ ಸಿನಿಮಾ ನಿರ್ಮಾಪಕರಿಗೆ, ಚಿತ್ರ ಮಂದಿರಗಳ ಮಾಲೀಕರಿಗೆ ಬೇಸರ ಉಂಟು ಮಾಡಿದೆ.
ಕೊರೊನಾದಿಂದಾಗಿ ಬರೋಬ್ಬರಿ ಏಳು ತಿಂಗಳುಗಳ ಕಾಲ ಇಡೀ ಸಿನಿಮಾ ರಂಗವೇ ತನ್ನ ಕಾರ್ಯಚಟುವಿಕೆಯನ್ನು ನಿಲ್ಲಿಸಿತ್ತು. ಆದರೆ, ಕೆಲವು ತಿಂಗಳಿಂದ ಕನ್ನಡ ಸೇರಿದಂತೆ ಇತರೆ ಸಿನಿಮಾ ರಂಗಗಳು ಚುಟುವಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮತ್ತೆ ತಮ್ಮ ಗತಕಾಲದ ವೈಭವನ್ನು ಮುಂದುವರೆಸಲು ಭರ್ಜರಿ ತಯಾರಿ ನಡೆಸಲು ಮುಂದಾಗಿದ್ದವು. ಇವೆಲ್ಲದರ ನಡುವೆ ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ ಶೇ 50 ಸೀಟುಗಳನ್ನು ಸಿನಿಮಾ ಮಂದಿರಗಳಲ್ಲಿ ಅವಕಾಶ ನೀಡಲಾಗಿತ್ತು. ದಿನಗಳು ಕಳೆದಂತೆ ಕೇಂದ್ರ ಸರ್ಕಾರ ಶೇ 100 ಸೀಟುಗಳನ್ನು ಕೆಲವು ಮಾರ್ಗಸೂಚಿಗಳಿಗೆ ಅನುಗುಣವಾಗಿ ಅವಕಾಶ ನೀಡಿತ್ತು.
ಆದರೆ, ಇದಕ್ಕೆ ರಾಜ್ಯ ಸರ್ಕಾರ ಶೇ 50 ಸೀಟುಗಳನ್ನು ಮಾತ್ರ ಅವಕಾಶ ನೀಡುವುದಾಗಿ ಹೇಳಿದ ಬಳಿಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಕೂಡಲೇ ಈ ನಿರ್ಧಾರಿಂದ ಹೊರ ಬಂದು ಶೇ 100 ಸೀಟುಗಳನ್ನು ಭರ್ತಿ ಮಾಡುವಂತೆ ಅವಕಾಶವನ್ನು ನೀಡಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೂ ಕೂಡ ರಾಜ್ಯ ಸರ್ಕಾರ ತನ್ನ ಆದೇಶವನ್ನು ವಾಪಸ್ಸು ಪಡೆದುಕೊಂಡು, ಮತ್ತೆ ಶೇ 100 ಸೀಟುಗಳನ್ನು ಒಳಗೊಂಡತೆ ಸಿನಿಮಾ ಮಂದಿಗಳು ಕಾರ್ಯಚರಣೆ ನಡೆಸಲು ಅವಕಾಶ ನೀಡಿದೆ. ಆದರೆ, ರಾಜ್ಯ ಸರ್ಕಾರದ ಹೊಸ ಆದೇಶ ಬಳಿಕ ಶುಕ್ರವಾರ ಕನ್ನಡದ ಕೆಲವು ಸಿನಿಮಾಗಳು ಬಿಡುಗಡೆಯಾಗಿದ್ದು, ಥಿಯೇಟರ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಲು ಬಂದಿಲ್ಲ ಎನ್ನಲಾಗಿದೆ.
ಸಹಜವಾಗಿ ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರಲ್ಲಿ, ಚಿತ್ರ ವಿತರಕರಲ್ಲಿ ಭಯದ ವಾತವಾರಣ ನಿರ್ಮಾಣವಾಗಿದ್ದು, ಜನತೆ ಕೊರೊನಾ ಭಯದಿಂದ ಇನ್ನೂ ಕೂಡ ಹೊರ ಬಂದಿಲ್ಲ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದರೂ ಕೂಡ ಜನತೆಯಲ್ಲಿ ಅದರ ಬಗ್ಗೆ ಇನ್ನೂ ಕೂಡ ಭಯವಿರುವುದರಲ್ಲಿ ಯಾವುದೇ ಸಂಶಯವಿಲ್ಲ.