ವಿದೇಶಿ ಗಾಯಕಿ ಟ್ವಿಟ್ ನಿಂದ ಎಚ್ಚರಗೊಂಡ ಸ್ಟಾರ್ ಗಳು: ಮಾತಿನಲ್ಲಿ ಛಾಟಿ ಬಿಸಿದ ನಿರ್ದೇಶಕ ಕವಿರಾಜ್

ಬೆಂಗಳೂರು : ರೈತ ಹೋರಾಟದಲ್ಲಿ ನೂರಕ್ಕೂ ಹೆಚ್ಚು ರೈತರು ಅಸುನೀಗಿದಾಗ ಅವರಿಗಾಗಿ ಮಿಡಿಯದ ಬಾಲಿವುಡ್ ಸ್ಟಾರ್ ಗಳು, ವಿದೇಶಿ ಗಾಯಕಿಯ ಒಂದು ಸಾಲು ಟ್ವಿಟ್ ನಿಂದ ಎಚ್ಚರಗೊಂಡಿದ್ದಾರೆ ಎಂದು ಕನ್ನಡ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ ಬಾಲಿವುಡ್ ಮಂದಿಯನ್ನು ಲೇವಡಿ ಮಾಡಿದ್ದಾರೆ.
ಇಂದು ದೂರ ದೇಶದ ಒಬ್ಬ ಹೃದಯವಂತ ಗಾಯಕಿ ಭಾರತೀಯ ರೈತ ಪರ ಒಂದು ಸಾಲು ಬರೆದಿದ ಬಳಿಕ ಎಚ್ಚತ್ತುಕೊಂಡಿರುವ ಬಾಲಿವುಡ್ ಕಲಾವಿದರ ಟ್ವೀಟ್ ಗಳ ಬಗ್ಗೆ ಕವಿ ರಾಜ್ ಪ್ರತಿಕ್ರಿಯೆ ನೀಡಿದ್ದು, ಇವರದೆಲ್ಲಾ ಒಂದೇ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ದೇಶಪ್ರೇಮ ಉಕ್ಕಿ ಹರಿದಿದೆ. ಈ ಸ್ಟಾರ್ ಗಳು ಮಾಡಿದ ಟ್ವಿಟ್ ಗಳು ಸಹಜ ಟ್ವೀಟ್ ಗಳಲ್ಲ. ರಿಹಾನ್ನಾ ಟ್ವೀಟ್ ಇಂದ ಆದ ಡ್ಯಾಮೇಜ್ ಕಂಟ್ರೋಲಿಗಾಗಿ ಆಳುವವರ ಆದೇಶದಂತೆ, ಪ್ರಾಯೋಜಕರು ಕಳಿಸಿದ ಒಂದೇ ಬರವಣಿಗೆಯನ್ನು ಹಲವರು ಕಾಪಿ ಪೇಸ್ಟ್ ಮಾಡುವಷ್ಟರ ಮಟ್ಟಿಗೆ ಯೋಜಿತ ಪ್ರಾಯೋಜಿತ ದೇಶಪ್ರೇಮದ ಟ್ವೀಟ್ ಗಳಷ್ಟೇ’ ಎಂದಿದ್ದಾರೆ ಜರಿದಿದ್ದಾರೆ.
ಆಡಿಸುವಾತನ ಕೈ ಚಳಕದಲೆ ಎಲ್ಲ ಅಡಗಿದೆ ಎಂದಿರುವ ಕವಿರಾಜ್, ಪ್ರಾಯೋಜಕರಿಲ್ಲದೇ ಏನೂ ಮಾಡುವವರಲ್ಲ ಈ ಸ್ಟಾರ್ ಗಳು. ಇದೇ ಹೋರಾಟದಲ್ಲಿ ನೂರಕ್ಕೂ ಹೆಚ್ಚು ರೈತರು ಅಸುನೀಗಿದಾಗ ನೀವು ಅವರಿಗಾಗಿ ಮಿಡಿಯಲಿಲ್ಲ. ಅದೇ ದೊಡ್ಡ ದೇಶದ ಅಧ್ಯಕ್ಷ , ಅಧಿಕೃತವಾಗಿ ಆ ದೇಶದ ಇಡೀ ಜನಸಂಖ್ಯೆಯ ಪ್ರತಿನಿಧಿಯಾದ ವ್ಯಕ್ತಿ ನಮ್ಮ ಭಾರತವನ್ನು ‘ಕೊಳಕು ಅಂದಾಗ ನಿಮ್ಮ ದೇಶಪ್ರೇಮ ಜಾಗೃತವಾಗಲಿಲ್ಲ. ಆದರೆ, ಅದೇ ದೇಶದ ಒಬ್ಬ ಹೃದಯವಂತ ಗಾಯಕಿ ನಮ್ಮ ದೇಶದ ನೊಂದ ರೈತರ ಪರ ಒಂದೇ ಒಂದು ಸಾಲು ಬರೆದ ಕೂಡಲೇ ನಿಮಗೆ ನಮ್ಮ ದೇಶದ ಸಮಗ್ರತೆ, ಸಾರ್ವಭೌಮತ್ವ ಎಲ್ಲಾ ನೆನಪಾಗಿ ಬಿಟ್ಟಿತ್ತಲ್ಲಾ. ಇಷ್ಟು ಎತ್ತರ ಏರಿದ ಮೇಲು ಯಾರದೋ ಕೈ ಗೊಂಬೆಯಾಗುವ ಇಂತಾ ಚಮಚಾಗಿರಿ ಬೇಕಿತ್ತಾ ಸ್ವಾಮಿ? ಎಂದು ಕವಿರಾಜ್ ಬಾಲಿವುಡ್ ಸ್ಟಾರ್ ಗಳನ್ನು ಪ್ರಶ್ನಿಸಿದ್ದಾರೆ.