ಬಾಹ್ಯಾಕಾಶಕ್ಕೆ ಭಗವದ್ಗೀತೆ, ಪ್ರಧಾನಿ ಮೋದಿ ಫೊಟೋ ಹೊತ್ತೊಯ್ಯಲಿದೆ ರಾಕೆಟ್..!
ನವದೆಹಲಿ: ಹಿಂದೂಗಳ ಪವಿತ್ರ ಗ್ರಂಥ ಭಗವ್ದೀತೆ ಮತ್ತು ಪ್ರಧಾನಿ ನರೇಂದ್ರ ಮೊದಿ ಅವರ ಫೋಟೋವನ್ನು ಇಸ್ರೋದ ರಾಕೆಟ್ ಅಂತರಿಕ್ಷಕ್ಕೆ ಹೊತ್ತೊಯ್ಯಲಿದೆ. ಸ್ಪೇಸ್ಕಿಡ್ಸ್ ನಿರ್ಮಿಸಿದ ಮಿನಿ ರಾಕೆಟ್ ಇವನ್ನು ನಭಕ್ಕೆ ಹೊತ್ತೊಯ್ಯಲ್ಲಿದೆ. ಇದೇ ಫೆ,28ರಂದು ಈ ಮಿನಿ ಉಪಗ್ರಹ ಉಡಾವಣೆಯಾಗಲಿದ್ದು, ಶಾಲಾ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಅರಿವು ಮೂಡಿಸಲು ಇದನ್ನು ಹಾರಿಬಿಡಲಾಗುತ್ತಿದೆ.
ಪಿ ಎಸ್ ಎಲ್ ವಿ ಸಿ -51 ಮೂಲಕ ಬ್ರೆಜಿಲ್ ಗೆ ಸೇರಿದ ಅಮೆಜೋನಿಯಾ-1, ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧಾವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳನ್ನು ಇಸ್ರೋ ಅಂತರಿಕ್ಷಕ್ಕೆ ಕಳುಹಿಸಲಿದೆ. ಭಾರತೀಯ ಉಪಗ್ರಹಗಳಲ್ಲಿ, ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್ ಇಂಡಿಯಾ’ ‘ಯೂನಿಟಿಶಾಟ್’ ಅನ್ನು ಜಿಟ್ ಶಾಟ್, ಜಿಹೆಚ್ಆರ್ ಸಿ ಈ ಶಾಟ್, ಶ್ರೀ ಶಕ್ತಿ ಶಾಟ್ ಇಂಜನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಪಿಎಸ್‌ಎಲ್‌ವಿ ಸಿ -51 ವಾಹಕವನ್ನು ಫೆಬ್ರವರಿ 28 ರಂದು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.