ಕೊರೊನಾ ಲಸಿಕೆ ಕೊವಾಕ್ಸಿನ್ಶೇ.77.8ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ 3ನೇ ಪ್ರಯೋಗದ ವರದಿಯಲ್ಲಿ ತಿಳಿಸಿದೆ.
ಭಾರತ್ ಬಯೋಟೆಕ್ ತನ್ನ ಮೂರನೇ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ವಿಷಯ ತಜ್ಞರ ಸಮಿತಿಗೆ (ಎಸ್‍ಇಸಿ) ಮಂಗಳವಾರ ಸಲ್ಲಿಸಿದ.
ದೇಶಾದ್ಯಂತ ನಡೆಸಿದ 3ನೇ ಹಂತದ ಪ್ರಯೋಗಗಳಲ್ಲಿ ಕೋವಾಕ್ಸಿನ್ ಶೇ. 77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೊವಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಸ್ವೀಕರಿಸಿದ್ದೇವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವರದಿಗಳ ಪ್ರಕಾರ ಮೂರನೇ ಹಂತದ ದತ್ತಾಂಶವನ್ನು ಪರಿಶೀಲಿಸಲು ವಿಷಯ ತಜ್ಞರ ಸಮಿತಿ ಮಂಗಳವಾರ ಸಭೆ ಸೇರುವ ಸಾಧ್ಯತೆ ಇದೆ.
ಭಾರತ್ ಬಯೋಟೆಕ್ ಕಂಪನಿ ಮೂರನೇ ಹಂತದ ವರದಿಯನ್ನು ಜೂನ್ ನಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ ಜೂನ್ ತಿಂಗಳಿನಲ್ಲಿ ವರದಿ ಸಲ್ಲಿಕೆಯಾಗದ್ದನ್ನು ಹಲವು ಮಂದಿ ಪ್ರಶ್ನಿಸಿದ್ದರು. ವಿವಾದ ಎದ್ದ ಬೆನ್ನಲ್ಲೇ ಈಗ ಭಾರತ್ ಬಯೋಟೆಕ್ ಈಗ ತನ್ನ ವರದಿಯನ್ನು ಸಲ್ಲಿಸಿದೆ.