ಪಶುವೈದ್ಯಕೀಯ ವಿಶ್ವವಿದ್ಯಾಲಯವನ್ನ ಇಬ್ಭಾಗ ಮಾಡಲು ಹೊರಟ ಸರ್ಕಾರ!

ವಿಶ್ವಕುಮಾರ್
ಬೀದರ್: ರಾಜಕೀಯ ಹಗ್ಗ ಜಗ್ಗಾಟ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ? ರಾಜ್ಯದಲ್ಲಿರುವ ಎಕೈಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಇಬ್ಬಾಗ ಮಾಡುವ ಚಿಂತನೆ ನಡೆದಿರುವ ಬೆನ್ನಲ್ಲೆ ಸರ್ಕಾರದ ಸರ್ವಾಧಿಕಾರ ಆಡಳಿತದ ವಿರುದ್ದ ಕಲ್ಯಾಣ ಕರ್ನಾಟಕ ಭಾಗದ
ಜನತೆಯ ಆಕ್ರೋಶದ ಕಿಚ್ಚು ಹೆಚ್ಚಿಸುವಂತೆ ಮಾಡಿದೆ.
ರಾಜ್ಯದಲ್ಲೇ ಏಕೈಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವಿರುವದು, ಅದು ಉತ್ತರದ ತುತ್ತತುದಿ ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರೊ ಬೀದರ್ ಜಿಲ್ಲೆಯ ನಂದಿ ನಗರದ ದಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಯದ ವ್ಯಾಪ್ತಿಗೆ 7 ಪಶುವೈದ್ಯಕೀಯ, 2 ಹೈನು ವಿಜ್ಞಾನ, ಒಂದು ಮೀನುಗಾರಿಕೆ, 6 ಪಾಲಿಟೆಕ್ನಿಕ್, 10 ಸಂಶೋದನಾ ಮತ್ತು ಮಾಹಿತಿ ಕೇಂದ್ರ ಸೇರಿದಂತೆ, 15 ಕ್ಕೂ ಹೆಚ್ಚು ಪಶು ಮಹಾವಿದ್ಯಾಲಯಗಳು ಸೇರ್ಪಟ್ಟಿವೆ.
ಕಲ್ಯಾಣ ಕರ್ನಾಟಕ ಭಾಗದ ಜನತೆಯ ಹೋರಾಟದ ಫಲವಾಗಿ 2005 ರಲ್ಲಿ ರಾಜ್ಯದಲ್ಲೇ ಏಕೈಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆಗಳ ವಿಜ್ಞಾನ ವಿಶ್ವವಿದ್ಯಾಲಯ ಆರಂಭವಾಗಿದೆ. ಬರೊಬ್ಬರಿ 16 ವರ್ಷಗಳು ಕಳೆದು ಹೋಗಿವೆ, ಈ ಮಧ್ಯೆ ಸಿಎಂ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗ ದಲ್ಲಿ ಎರಡನೇ ಪಶು ವೈದ್ಯಕೀಯ. ಮತ್ತು ಮೀನುಗಾರಿಕೆಗಳ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಾಸಕರು ಸಚಿವರು ಹಾಗೂ ಲೋಕಸಭೆ ಸದಸ್ಯರು ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೆ ವಿಶ್ವವಿದ್ಯಾಲಯ ಮಾಡುವಂತೆ ಯಡಿಯೂರಪ್ಪ ಪುತ್ರ ಬಿ.ಬೈ ವಿಜಯೇಂದ್ರ ಮೇಲೆ ಒತ್ತಡ ಹೇರಿ ಬರುವ ಬಚೆಟ್ ನಲ್ಲಿ ತಾತ್ಕಾಲಿಕ ವಿಶ್ವವಿದ್ಯಾಲಯ ಸ್ಥಾಪನೆಗೆ 10 ಕೋಟಿ ಮೀಸಲಿಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿನ ಪಶುವೈದ್ಯಕೀಯ ವಿಶ್ವವಿದ್ಯಾಲಯ ಸ್ಥಳಾಂತರ ವಾದರೆ ಉಗ್ರಹೋರಾಟ ಮಾಡುವುದಾಗಿ ಪಶುವಿಶ್ವವಿದ್ಯಾಲಯ ಅಭೀವೃದ್ದಿ ಹೋರಾಟ ಸಮೀತಿ ಅದ್ಯಕ್ಷರಾದ ಬಸವರಾಜ್ ಹಾಗೂ ಸ್ಥಳಿಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿರುವ ಕೇವಲ ಒಂದು ಪಶುವೈದ್ಯಕೀಯದಲ್ಲೇ ಸಿಬ್ಬಂದಿಗಳ ಕೊರತೆ ಇದೆ. ಸದ್ಯ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರು, ಸಹಾಯಕ ಪ್ರಾದ್ಯಾಪಕರು ಸೇರಿ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಅವಶ್ಯಕತೆ ಇದೆ. ಈಗೀರುವ ವಿಶ್ವವಿದ್ಯಾಲಯದಲ್ಲಿ ಕೆವಲ 500 ಸಿಬ್ಬಂದಿಗಳಿದ್ದು, ಸಿಬ್ಬಂದಿಗಳ ಸಂಬಳ ಸೇರಿದಂತೆ ವಿವಿ ಅಭಿವೃದ್ಧಿ ಗೆ ಹಣ ಬಿಡುಗಡೆಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲಾ ಎನ್ನುತ್ತಾರೆ.
ಇಂತಹ ಸಂಧರ್ಬದಲ್ಲಿ ಶಿವಮೊಗ್ಗ ದಲ್ಲಿಮತ್ತೊಂದು ವಿವಿ ಸ್ಥಾಪನೆಗೆ ಈವರಿಗೆ ಹಣ ಎಲ್ಲಿಂದ ಬರುತ್ತೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನೆಮಾಡಿದ್ದಾರೆ. ಅಷ್ಟೆ ಅಲ್ಲಾ ಈಗಿರುವ ವಿವಿ ಇಬ್ಬಾಗ ಮಾಡಿ ಮತ್ತೊಂದು ವಿವಿ ಸ್ಥಾಪನೆ ಮಾಡಬೇಡಿ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕಲ್ಯಾಣಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಮತ್ತೊಂದು ಪಶುವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಮಾಡೋದಾದ್ರೆ, ನಮ್ಮ ಭಾಗದಲ್ಲಿ ರಾಜೀವ್ ಗಾಂದೀ ವಿಶ್ವವಿದ್ಯಾಲಯ ಹಾಗೂ ತಾಂತ್ರೀಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡೋಕೆ ಈವರಿಂದ ಆಗುತ್ತಾ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ, ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ ಒಂದು ವೇಳೆ ಮತ್ತೊಂದು ವಿವಿ ಸ್ಥಾಪನೆಯಾದ್ರೆ ಉಗ್ರಹೋರಾಟ ಮಾಡುತ್ತೆವೆ ರಂದು ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲಾ ಸದ್ಯ ಅಧಿವೇಶನ ನಡೆಯುತ್ತಿದ್ದು, ನಾಳಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುವೆ ಎಂದು ಹೇಳಿದ್ದಾರೆ. ಸಧ್ಯ ಹೈದ್ರಾಬಾದ್ ಕರ್ನಾಟಕ ಬದಲಾಗಿ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಸಿಎಂ ಯಡಿಯೂರಪ್ಪ ಕಲ್ಯಾಣ ಅಭಿವೃದ್ಧಿ ಮಾಡುವ ಬದಲಾಗಿ ಮಲತಾಯಿ ಧೋರಣೆ ಮಾಡುತ್ತ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎನ್ನುವ ಮಾತುಗಳು ಈಗ ಮತ್ತೆ ಕೇಳಲಾರಂಬಿಸಿವೆ. ಇನ್ನು ಜಿಲ್ಲೆಯವರೇ ಆದ ಪಶುವೈದ್ಯಕೀಯ ಸಚಿವ ಪ್ರಭುಚೌಹಾಣ್ ತಮ್ಮ ಜಿಲ್ಲೆಯಲ್ಲಿನ ಪಶುವೈದ್ಯಕೀಯ ಮತ್ತು ಮೀನುಗಾರಿಕೆಗಳ ವಿಜ್ಞಾನಗಳ ವಿಶ್ವವಿದ್ಯಾಲಯ ಉಳಿಸಿಕೊಳ್ಳುತ್ತಾರಾ ಎಂಬು ಇದೀಗಾ ಯಕ್ಷ ಪ್ರಶ್ನೆಯಾಗಿ ಉಳಿದಿದೆ.!