ತಪ್ಪಿದ ಭಾರಿ ಅನಾಹುತ: ಭಕ್ತರ ಮೇಲೆ ಲಾಠಿ ಪ್ರಹಾರ!
ರಾಯಚೂರು: ತಾಲ್ಲೂಕಿನ ಮಟಮಾರಿ ಗ್ರಾಮದಲ್ಲಿಂದು ವೀರಭದ್ರೇಶ್ವರ ದೇವರ ರಥೋತ್ಸವವನ್ನ ಏಪಡಿಸಲಾಗಿತ್ತು. ಈ ವೇಳೆ ನಿಗದಿತ ಸ್ಥಳ ಬಿಟ್ಟು, ರಥವನ್ನ ಮುಂದಕ್ಕೆ ಎಳೆಯುತ್ತಿದ್ದ ಭಕ್ತರನ್ನ ಕಂಡ ಪೊಲೀಸರು, ರಥವನ್ನ ಮುಂದಕ್ಕೆ ಎಳೆಯದಂತೆ ಹೇಳಿದ್ದಾರೆ. ಆಗ ರಥೋತ್ಸವದ ಹಗ್ಗ ಹರಿದು ತುಂಡಾಗಿ ತೇರು ಮುಂದಕ್ಕೆ ಸಾಗಿ ಜನರ ಮೇಲೆ ಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಭಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಪ್ರಹಾರ ನಡೆಸಿದ್ದಾರೆ. ಕೋವಿಡ್ ನಿಯಮ ಪ್ರಕಾರ, ಸಂಕ್ಷಿಪ್ತವಾಗಿ ಸರಳವಾಗಿ ಆಚರಿಸಲು ಅನುಮತಿ ನೀಡಲಾಗಿತ್ತು. ಆದ್ರೆ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ಭಕ್ತಾದಿಗಳು ನಿಗದಿಪಡಿಸಿದ ಸ್ಥಳಕ್ಕೆ ಮಾತ್ರ ತೇರನ್ನು ಎಳೆಯಲು ಅವಕಾಶ ನೀಡಲಾಗಿತ್ತು.
ಉತ್ಸಾಹದಲ್ಲಿದ್ದ ಭಕ್ತರು ತೇರನ್ನು ಎಳೆಯಲು ಪ್ರಯತ್ನಿಸಿದಾಗ ಪೊಲೀಸರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಅದ್ರೆ ಸಾವಿರಾರು ಭಕ್ತರ ಸೇರಿದ್ದರಿಂದ ಅಲ್ಲಿ ನೂಕುನುಗ್ಗಲಾಗಿದೆ. ಅ ಕ್ಷಣಕ್ಕೆ ರಥದ ಹಗ್ಗ ತುಂಡಾಗಿದೆ. ರಥದ ನಿಯಂತ್ರಣ ತಪ್ಪಿ ಪೊಲೀಸರ ವಾಹನದತ್ತ ನುಗ್ಗಿದೆ. ಪೊಲೀಸ್ ವಾಹನದ ಪಕ್ಕದಲ್ಲೇ ರಥ ಸಾಗಿದೆ. ಸಧ್ಯ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಸಾವಿರಾರು ಸಂಖ್ಯೆಯಲ್ಲಿದ್ದ ಸೇರಿದ್ದ ಭಕ್ತರನ್ನು ಚದುರಿಸಲು ಈ ವೇಳೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ.
