ಬೈಕ್ ವ್ಹೀಲಿಂಗ್ ಮಾಡುತ್ತಾ ಸತಾಯಿಸುತ್ತಿದ್ದ ಯುವಕರ ಪುಂಡಾಟನಿಂದ ಸಿಟ್ಟಿಗೆದ್ದ ಕಾರು ಚಾಲಕ ಬೈಕ್ ಗೆ ಬೆಂಕಿ ಹಚ್ಚಿ ಸುಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೇವನಹಳ್ಳಿಯ ಆವತಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.
ದೇವನಹಳ್ಳಿಯ ನಂದಿಬೆಟ್ಟ ರಸ್ತೆಯ ರಾಣಿಕ್ರಾಸ್ ನಿಂದ ಆವತಿವರೆಗೂ ವ್ಹೀಲಿಂಗ್ ಮಾಡುತ್ತಾ ದಾರಿ ಬಿಡದೇ ಬೈಕ್ ಸವಾರ ಸತಾಯಿಸುತ್ತಿದ್ದ. ಪುಂಡರ ಬೈಕ್ ಅಡ್ಡಗಟ್ಟಿದ ಕಾರು ಚಾಲಕ ಬೈಕ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ವ್ಹೀಲಿಂಗ್ ಗೆ ಬಳಸಿದ್ದ ಬೈಕ್ ಸಂಪೂರ್ಣ ಭಸ್ಮಗೊಂಡಿದೆ. ಬೈಕ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಕಾರು ಚಾಲಕ ಸ್ಥಳದಿಂದ ಹೊರಟು ಹೋಗಿದ್ದಾರೆ.
ಬೈಕ್ ಗೆ ಬೆಂಕಿ ಹಚ್ಚಿದರೂ ಕಾರು ಚಾಲಕನ ವಿರುದ್ಧ ಸವಾರರು ದೂರು ನೀಡದೆ ಸುಮ್ಮನಾಗಿದ್ದಾರೆ. ಸುಟ್ಟು ಕರಕಲಾಗಿರು ಬೈಕ್ ಹೆದ್ದಾರಿ ಬದಿಯಲ್ಲೆ ಬಿದ್ದಿದೆ. ದೇವನಹಳ್ಳಿಯ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.