ದಾವಣಗೆರೆ: 32ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಚಾರಣೆ ಅಂಗವಾಗಿ ಹರಿಹರದಲ್ಲಿ ಗ್ರಾಮಾಂತರ ಡಿ ವೈ ಎಸ್ ಪಿ ನರಸಿಂಹ ವಿ. ತಾಮ್ರಧ್ವಜ ಅವರ ನೇತೃತ್ವದಲ್ಲಿ ಬೈಕ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಹರಿಹರ ವೃತ್ತದ ಸಿಬ್ಬಂದಿ ಹೆಲ್ಮೆಟ್ ಧರಿಸಿ ನಗರದ ಗಾಂಧಿನಗರ, ನಾಲಾ ಮೊಹಲ, ಹಳ್ಳದಕೇರಿ, ಶಿವಮೊಗ್ಗ ರಸ್ತೆ, ಕಾಳಿದಾಸ ನಗರ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಸಂಚರಿಸಿದರು. ಈ ಮೂಲಕ ರಸ್ತೆ ಸುರಕ್ಷತಾ ಘೋಷಣೆಗಳನ್ನು ಕೂಗಿ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಬೈಕ್ ಜಾಥಾದಲ್ಲಿ ಹರಿಹರ ಸಿಪಿಐ ಸತೀಶ್, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವಿಕುಮಾರ್ ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ತೇಲಿ ಸೇರಿದಂತೆ ಹಲವರು ಭಾಗವಹಿಸಿದ್ದರು. .