ರಾಷ್ಟ್ರಧ್ವಜದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಅಭಿನಂದನೆ ವ್ಯಕ್ತಪಡಿಸುತ್ತೇನೆ. ಆದರೆ ಈಶ್ವರಪ್ಪ ರಾಜೀನಾಮೆ ಪಡೆದರೆ ಪಕ್ಷದ ಗೌರವ ಉಳಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಕೊನೆಗೂ ಅರಿವು ಆಗಿದೆ. ಈಶ್ವರಪ್ಪ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ತಿದ್ದರು ಎಂದರು.
ಈಶ್ವರಪ್ಪನ್ನ ವಜಾ ಮಾಡಿದ್ರೆ ಗೌರವ ಉಳಿಯುತ್ತೆ. ರಾಜ್ಯಪಾಲರಿಗೆ ವಜಾ ಮಾಡಿ ಎಂದು ಒತ್ತಾಯಿಸಿದ್ದೇವೆ. ರಾಜ್ಯಪಾಲರು ಏನ್ ತೀರ್ಮಾನ ಮಾಡ್ತಾರೋ ನೋಡೊಣ. ಯಾರೇ ಆದರೂ ರಾಷ್ಟ್ರದ ಬಾವುಟಕ್ಕೆ ಅಗೌರವ ಮಾಡಬಾರದು. ಸವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕು ಅಷ್ಟೇ ಎಂದು ಡಿಕೆ ಶಿವಕುಮಾರ್ ಹೇಳಿದರು.