ಎಸ್ಪಿ ಸೂಚನೆ ಮೇರೆಗೆ ನಿನ್ನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದ ಸಿಪಿಐ ದೇವರಾಜ್ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶಪಡಿಸಿಕೊಂಡಿದ್ದರು.
ಮರಳು ಗಣಿಗಾರಿಕೆ ನಡೆಸುತ್ತಿದ್ದವರ ದೂರಿನ ಹಿನ್ನೆಲೆಯಲ್ಲಿ ಹೊನ್ನಾಳಿ ಸಿಪಿಐ ದೇವರಾಜ್ ಗೆ ಕರೆ ಮಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಎಸ್ಪಿ ರಿಷ್ಯಂತ ಅವರಿಗೆ ಆವಾಜ್ ಹಾಕಿದ್ದಾರೆ.
ಜಿಲ್ಲೆಗೆ ಬಂದ ತಕ್ಷಣ ದೊಡ್ಡ ಹಿರೋ ಎನ್ರಿ ಅವನು? ಮಟ್ಕಾ ಆಡೋರನ್ನ ಜೂಜಾಡೋರನ್ನ ಹಿಡೀರಿ. ಇಲ್ಲಿ ಬಂದು ಸ್ಟಂಟ್ ಮಾಡೊಕೆ ಬಂದ್ರೆ ನಡೆಯಲ್ಲ. ಮರಳು ಗಣಿಗಾರಿಕೆ ಮಾಡುವವರು ಅತ್ಯಾಚಾರ ಕೊಲೆ ಮಾಡಿದ್ದಾರಾ? ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಅವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ ಎಂದ ಶಾಸಕ ರೇಣುಕಾಚಾರ್ಯ ಎಸ್ ಪಿಗೆ ಸವಾಲು ಹಾಕಿದ್ದಲ್ಲದೇ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.