ಚಾಚರಾಮಜನಗರ : ರಾಜ್ಯ ಬಿಜೆಪಿಯಲ್ಲಿರುವ 120 ಶಾಸಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪರವಾಗಿದ್ದೇವೆ. ಹೀಗಿರುವಾಗ ಅವರ ಪರ ಸಹಿ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರೇಣುಕಾಚಾರ್ಯ ಅವರು ಸಿಎಂ ಯಡಿಯೂರಪ್ಪ ಪರ ಸಹಿ ಸಂಗ್ರಹಿಸುತ್ತಿರುವ ಹಿನ್ನೆಲೆ ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ, ಬದಲಾವಣೆ ಮಾಡುವ ಪರಿಸ್ಥಿತಿಯೂ ಬರುವುದೇ ಇಲ್ಲ. ಅವಧಿ ಪೂರ್ಣವಾಗುವವರೆಗೂ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಮುಂಬರುವ ಚುನಾವಣೆಗೂ ಸಹ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಿದರು.
ಇನ್ನು ಯಾರು ಸಹ ಸಹಿ ಸಂಗ್ರಹ ಮಾಡಬಾರದು ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಸಿಎಂ ವಿಚಾರದಲ್ಲಿ ಯಾರು ಸಹ ಅಪಸ್ವರ ಎತ್ತುವುದಿಲ್ಲ. ಪಕ್ಷದಲ್ಲಿರುವ ನಾವು 120 ಜನರು ಬಿ.ಎಸ್.ಯಡಿಯೂರಪ್ಪ ಅವರ ಪರವಿದ್ದೇವೆ. ನಾನು ಎಂದಿಗೂ ಬಿಜೆಪಿ ಮತ್ತು ಯಡಿಯೂರಪ್ಪ ಪರವಾಗಿರುತ್ತೇನೆ. ಬಿಜೆಪಿಯಲ್ಲಿ ಯಾವುದೇ ಗೊಂದಲವಾಗಲಿ ಅಥವಾ ಅಪಸ್ವರಗಳಾಗಲಿ ಇಲ್ಲ. ಕೊರೊನಾ ಸಂದರ್ಭದಲ್ಲಿ ಕೋವಿಡ್ ವಿರುದ್ದ ಹೋರಾಡುವುದು ನಮ್ಮ ಜವಾಬ್ದಾರಿ ಅದು ಬಿಟ್ಟು ಬೇರೆ ಚರ್ಚೆ ಬೇಡ ಎಂದು ಎಂದರು.