ದುಡ್ಡು ಕೊಟ್ಟೋರಿಗೆ ಮಾತ್ರ ಕಾಮಗಾರಿ ಮಂಜೂರು: ಮರಿತಿಬ್ಬೇಗೌಡ ಆರೋಪ

ಬೆಂಗಳೂರು : ದುಡ್ಡು ಕೊಟ್ಟೋರಿಗೆ ಮಾತ್ರ ಕಾಮಗಾರಿ ಮಂಜೂರು ಮಾಡತಾರೆ ಎಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಮರಿತಿಬ್ಬೇಗೌಡರ ಆರೋಪಿಸಿದರು.
ಮರಿತಿಬ್ಬೇಗೌಡರ ಈ ಮಾತು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಜಟಾಪಟಿ ಕಾರಣವಾಯಿತು. ಹಿಂದಿನ ಕಾಂಗ್ರೆಸ್- ಜೆಡಿಎಸ್ ಸರಕಾರದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಂಡ್ಯ ಜಿಲ್ಲೆಗೆ ಮಂಜೂರು ಮಾಡಲಾಗಿತ್ತು. ಆದರೆ, ಜಲಸಂಪನ್ಮೂಲ ಸೇರಿದಂತೆ ಸಾಕಷ್ಟು ಇಲಾಖೆಗಳ ಕಾಮಗಾರಿಗಳನ್ನು ತಡೆಹಿಡಿಯಲಾಗಿದೆ? ಮಲತಾಯಿ ಧೋರಣೆ ಯಾಕೆ? ಯಾಕೆ ನಿಮಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಆಗುವುದು ಬೇಡವೇ? ದುಡ್ಡು ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಮದ್ದೂರಿನ ಮೂರು ಕಾಮಗಾರಿಗಳಿಗೆ ಮಾತ್ರ ಅನುಮತಿ ನೀಡಿದ್ದೀರಿ ಎಂದು ಆರೋಪಿಸಿದರು.
ಕಾಮಗಾರಿ ಅನುಮೋದನೆಗೆ ಮಂಡ್ಯ ಜಿಲ್ಲೆಯಲ್ಲಿ 10% ಲಂಚ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದಾಗ, ಮರಿತಿಬ್ಬೇಗೌಡ. ಆರೋಪವನ್ನು ಗೃಹ ಸಚಿವ ಬೊಮ್ಮಾಯಿ ನಿರಾಕರಿಸಿದರು. ಇದರಿಂದ ಮತ್ತೆ ಸಿಟ್ಟಾದ ಪರಿಷತ್ ಸದಸ್ಯರು, ಹಾಗಾದರೆ ತಡೆಹಿಡಿಯಲಾಗಿದೆ ಎಂಬ ಪತ್ರ ನನ್ನ ಬಳಿ ಇರುವುದು ಸುಳ್ಳೇ? ಎಂದು ಪತ್ರ ಪ್ರದರ್ಶನ ಮರಿತಿಬ್ಬೇಗೌಡ ಮಾಡಿದರು.
ಆಗ ಇದೆಲ್ಲ ನಂಗೂ ಬಿಡ್ರಿ ಎಂದ ಬೊಮ್ಮಾಯಿ ಸಮಜಾಯಿ ನೀಡಲು ಮುಂದಾದರು. ಆಗ ಪತ್ರವನ್ನು ಮರಿತಿಬ್ಬೇಗೌಡ ಬಿಸಾಡಿ ಸಿಟ್ಟು ಪ್ರದರ್ಶನ ಮಾಡಿದರು. ಇದರಿಂದ ಮೇಲ್ಮನೆಯಲ್ಲಿ ಗೊಂದಲದ ಗೂಡಾಯಿತು. ಈ ವೇಳೆ ಗೌಡರ ದುರ್ವತನೆ ತೋರಿದ್ದಾರೆ. ಅವರನ್ನು ಅಮಾನತು ಮಾಡಿ ಎಂದ ಆಯನೂರು ಮಂಜುನಾಥ್ ಆಗ್ರಹಿಸಿದರು.
ಆಗ ಮಧ್ಯ ಪ್ರವೇಶ ಮಾಡಿದ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ಒಮ್ಮೊಮ್ಮೆ ಹೀಗೆ ಆಗುತ್ತೆ. ಇದನ್ನ ಮುಂದುವರೆಸೋದು ಬೇಡ. ಇಲ್ಲಿಗೆ ಮುಗಿಸಿ ಎಂದರು. ಹೊರಟ್ಟಿ ಮಾತಿಗೆ ಒಪ್ಪದ ಬಿಜೆಪಿ ಸದಸ್ಯರು. ಮರಿತಿಬ್ಬೇಗೌಡ ಅಮಾನತುಗೊಳಿಸುವಂತೆ ಬಿಜೆಪಿ ಸದಸ್ಯರ ಪಟ್ಟು ಹಿಡಿದರು. ಈ ವೇಳೆ ಪಕ್ಷದ ತಿಪ್ಪೇಸ್ವಾಮಿ, ಸಂದೇಶ್ ನಾಗರಾಜ್ ಅವರು ಮರಿತಿಬ್ಬೇಗೌಡ ಸಮಾಧಾನ ಪಡಿಸಲು ಮುಂದಾದರು. ಆಗ ಸಚಿವ ಮಾಧುಸ್ವಾಮಿ ಮರಿತಿಬ್ಬೇಗೌಡ ಅಮಾನತು ಮಾಡಬೇಕು ಆಗ್ರಹಸಿದರು.