ಬೆಂಗಳೂರು : ಆಧುನಿಕ ಜೀವನ ಶೈಲಿಯಲ್ಲಿ ಮನಷ್ಯನಿಗೆ ಯಾವುದರಲ್ಲಿ ತೃಪ್ತಿ ಸಿಗುತ್ತಿಲ್ಲ. ಇಂದು ಪರಿಚಯ, ನಾಳೆ ಸ್ನೇಹ, ನಾಡಿದ್ದು, ಪ್ರೀತಿ, ಪ್ರೇಮ ಎಂದು ಬಲಿಯಾಗುವ ಜನರು ಹೆಚ್ಚು.
ಅದೇ ರೀತಿ ಸಾಮಾಜಿಕ ಜಾಲತಾಣದಿಂದ ಪರಿಚಯವಾದ ವ್ಯಕ್ತಿಗೆ ಮಹಿಳೆಯೋರ್ವಳು ನಂಬರ್ ಕೊಟ್ಟು ಪೇಚಿಕೆ ಸಿಲುಕಿದ ಘನಟನೆ ಅನ್ನಪೂರ್ಣೇಶ್ವರಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಮಹಿಳೆಯು, ಕೆಂಗೇರಿಯ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದ ಚಿತ್ತೂರು ಮೂಲದ ಶ್ರವಣ್ ಕುಮಾರ್ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ಸ್ನೇಹವಾಗಿತ್ತು. ಇದಾದ ಬಳಿಕ ಇಬ್ಬರು ತಮ್ಮ ತಮ್ಮ ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿದ್ದರು. ಬಳಿಕ ಒಂದೆರಡು ಬಾರಿ ಭೇಟಿ ಕೂಡ ಮಾಡಿದ್ದರು.
ಈ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು ಶ್ರವಣ್ ಎರಡು ತಿಂಗಳ ನಂತರ ಪರಿಚವಾದ ಮಹಿಳೆಗೆ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದ. ಇದರಿಂದ ಮಹಿಳೆಗೆ ಕಿರಿಕಿರಿ ಅನುಭವಿಸಿದ್ದಾರೆ. ಇದರಿಂದಾಗಿ ಆತನ ನಂಬರ್ ಬ್ಲಾಕ್ ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ಶ್ರವಣ್ ಬೇರೆ ಬೇರೆ ನಂಬರ್‌ಗಳಿಂದ ಆಕೆಗೆ ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಆಕೆ ಕ್ಲಿನಿಕ್ ಬಳಿ ಬಂದು ಅವಳ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆಗ ಯುವತಿ ವಿರೋಧಿಸಿದ್ದಕ್ಕೆ ಆಕೆ ಬಟ್ಟೆ ಹರಿದು, ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಮಹಿಳೆಯು ಸ್ಥಳೀಯರ ನೇರವಿನಿಂದ ಆತನಿಂದ ಪಾರಾಗಿದ್ದಾಳೆ. ಬಳಿಕ ಅನ್ನಪೂರ್ಣೇಶ್ವರಿ ಠಾಣೆಗೆ ತೆರಳಿ ದೂರು ಸಹ ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಶ್ರವಣ್ ಅವರನ್ನು ಬಂಧಿಸಿದ್ದಾರೆ.