ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2021-2022 ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಕಾಗದ ರಹಿತವಾಗಿ ಮಂಡಿಸಲಿರುವ ಎಂಬ ಹೆಗ್ಗಳೀಕೆಗೆ ಪಾತ್ರವಾದರೆ, ಮತ್ತೊಂದು ಕಡೆ ಬಜೆಟ್ ಕೆಲವು ಸವಾಲುಗಳನ್ನು ಎದುರಿಸುತ್ತಿದೆ.
ಈ ಬಾರಿ ಆರ್ಥಿಕ ಪರಿಸ್ಥಿತಿ ಶೂಚನೀಯ ಸ್ಥಿತಿಯಲ್ಲಿದೆ. ವಿವಿಧ ವಲಯಗಳು ಸಂಕಷ್ಟ ಎದುರಿಸುತ್ತಿವೆ. ಕೋವಿಡ್ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಅವರದ್ದು ಒಂದು ರೀತಿಯಲ್ಲಿ ಸವಾಲಿನ ಕೆಲಸವಾಗಿದೆ. ಬಜೆಟ್‌ನಲ್ಲಿ ಉದ್ಯೋಗ ವಲಯಕ್ಕೆ ಆದ್ಯತೆ ನೀಡುವುದು ತುಂಬಾನೇ ಮುಖ್ಯವಾಗಿದೆ. ಕೊರೋನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದು, ಉದ್ಯೋಗವೇ ಬಹುದೊಡ್ಡ ಸವಾಲಾಗಿದೆ.
ಯುವಕರಿಗೆ ಉದ್ಯೋಗ ನೀಡುವಂತ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕೇಂದ್ರದ ಮುಂದಿರುವ ಮಹತ್ತರ ಜವಾಬ್ದಾರಿಯಾಗಿದೆ. ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಜೊತೆಗೆ ಬೇಡಿಕೆ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಸಣ್ಣ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ಸಾರ್ವಜನಿಕ ವಲಯದ ಯೋಜನೆಗಳಿಗೆ ಆದ್ಯತೆ ನೀಡಬೇಕಿದೆ. ಈ ಯೋಜನೆಗಳು ಜಿಡಿಪಿ ಉತ್ತೇಜನಕ್ಕೆ ಪೂರಕವಾಗಿರುವಂತೆ ಗಮನ ಹರಿಸಬೇಕಾಗಿದೆ.