ಬಹು ನೀರಿಕ್ಷಿತ ಕೆಜಿಎಫ್ 2 ರಿಲೀಸ್ ಡೇಟ್ ಫಿಕ್ಸ್: ಅಭಿಮಾನಿಗಳಲ್ಲಿ ಪುಳಕ:

ಬೆಂಗಳೂರು: ಈಡೀ ದೇಶವೇ ಕಾತರದಿಂದ ಕಾಯುತ್ತಿರೋ ಬಹು ನಿರೀಕ್ಷೆಯ ಚಿತ್ರ ಕೆಜಿಎಫ್ ಚಾಪ್ಟರ್-2. ಬೆಳ್ಳಿ ತೆರೆ ಮೇಲೆ ಬರುವು ಡೆಟ್ ನ್ನು ಚಿತ್ರತಂಡ ಘೋಷಣೆ ಮಾಡಿದೆ.
ಹೌದು, ಈಗಾಗ್ಲೇ ಬಿಡುಗಡೆಯಾಗಿರೋ ಟೀಸರ್ ಮೂಲಕವೇ ಚಿತ್ರರಂಗದ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿರುವ ಚಿತ್ರದ ಮೇಲೆ ಅಭಿಮಾನಿಗಳ ನೀರಿಕ್ಷೆ ಕೂಡಾ ಹೆಚ್ಚಾಗಿದೆ. ಚಿತ್ರ ತಂಡ ಚಿತ್ರದ ಎಲ್ಲ ಕೆಲಸಗಳನ್ನ ಮುಗಿಸಿ ಸದ್ಯ ಥಿಯೇಟರ್ಗೆ ಬರೋಕೆ ಸಜ್ಜಾಗಿದೆ. ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಬೆಳಿಗ್ಗೆಯೇ ಕೆಜಿಎಫ್ -2 ಚಿತ್ರದ ಬಿಡುಗಡೆಯ ದಿನಾಂಕವನ್ನ ಅನೌನ್ಸ್ ಮಾಡುವ ಕುರಿತ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ರು. ಅದರಂತೆ ಸಂಜೆ ವೇಳೆಗೆ ಡೇಟ್ ಕೂಡಾ ಅನೌನ್ಸ್ ಮಾಡಿದ್ದು 2021ರ ಜುಲೈ 16 ರಂದು ಅದ್ದೂರಿಯಾಗಿ ರಿಲೀಸ್ ಆಗ್ತಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಿನಿ ಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಯಶ್ ಅಭಿಮಾನಿಗಳು ಜುಲೈ-16 ನ್ನು ಕಾತರದಿಂದ ಕಾಯುತ್ತಿದ್ದಾರೆ.