ಅಡುಗೆ ಅನಿಲ ದರ ಏರಿಕೆ: ಗ್ರಾಹಕರಿಗೆ ಬರೆ

ಬೆಂಗಳೂರು : ಕೇಂದ್ರದ ಬಜೆಟ್ ಬಳಿಕ ಇಂಧನ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ, ಎಲ್ ಪಿ ಜಿ ಅಡುಗೆ ಅನಿಲ ದರದಲ್ಲಿ ಏರಿಕೆಯಾಗಿದೆ.
ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಗುರುವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ. ಈ ಬಾರಿ ಎಲ್ ಪಿಜಿ ಪ್ರತಿ ಸಿಲಿಂಡರ್ ಗೆ 25 ರೂ. ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 722 ರೂ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಲ್ ಪಿ ಜಿ ಅಡುಗೆ ಅನಿಲ ಸಿಲಿಂಡರ್ ಗೆ 719 ರೂ.ಗೆ ಏರಿಕೆಯಾಗಿದ್ದು, ಲಕ್ನೋದಲ್ಲಿ ಎಲ್ ಪಿಜಿ ಬೆಲೆ 757 ರೂ., ಕೋಲ್ಕತ್ತಾದಲ್ಲಿ 745.50 ರೂ., ಮುಂಬೈನಲ್ಲಿ 719 ರೂ., ಚೆನ್ನೈನಲ್ಲಿ 735 ರೂ. ಏರಿಕೆಯಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಒಂದು ಸಿಲಿಂಡರ್ ಗೆ 184 ರೂ ಹೆಚ್ಚಳವಾಗಿದೆ ಎಂದು ಸರ್ಕಾರ ತಿಳಿಸಿದೆ. ದೆಹಲಿಯಲ್ಲಿ ಒಂದು ವಾಣಿಜ್ಯ ಸಿಲಿಂಡರ್‌ಗೆ 1,533 ರೂ.ಆಗಿದ್ದು, ಮುಂಬೈಯಲ್ಲಿ 1,482.50 ರೂ ಮತ್ತು ಕೋಲ್ಕತ್ತಾದಲ್ಲಿ 1,598.50 ರೂ.ಆಗಿದೆ.