ಸರಕಾರಕ್ಕೆ ಆಕ್ಷನ್ – ಪ್ರಿನ್ಸ್ ದೃವ ಸರ್ಜಾ ಪ್ರಶ್ನೆ: ಚಿತ್ರಮಂದಿರ ನಿಯಮಾವಳಿಗೆ ಗಾಂಧಿ ನಗರ ಗರಂ

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಚಿತ್ರಮಂದಿರಗಳಿಗೆ ಮಾತ್ರ ಶೇ. 50 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಈಗ ಗಾಂಧಿ ನಗರ ಪುಲ್ ಗರಂ ಆಗಿದ್ದು, ಇಂದು ಆಕ್ಷನ್ – ಪ್ರಿನ್ಸ್ ದೃವ ಸರ್ಜಾ ಅವರು ಸರಕಾರ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿವರು ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರೂ, ರಾಜ್ಯ ಸರ್ಕಾರ ಶೇ. 50 ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿದ್ದು, ಸರ್ಕಾರದ ಈ ನಿರ್ಧಾರ ಸ್ಯಾಂಡಲ್ ವುಡ್ ಗೆ ಮಾರಕವಾಗಿದೆ.
ರೂಪಾಂತರಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಫೆ.28ರವರೆಗೆ ಚಿತ್ರ ಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರಿ ಮಾತ್ರ ಅವಕಾಶ ನೀಡಬೇಕಿದೆ. ಯಾವುದೇ ಕಾರಣಕ್ಕೂ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸರ್ಕಾರದ ಈ ನಿಲುವನ್ನು ವಿರೋಧಿಸಿ ಧ್ರುವ ಸರ್ಜಾ ಟ್ವೀಟ್ ಮಾಡಿದ್ದು, ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಶೇ.. 50 ರಷ್ಟು ನಿರ್ಬಂಧ ಏಕೆ? ಎಂದು ಸರಕಾರವನ್ನು ಪ್ರಶ್ನೆ ಮಾಡುವ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಿಕ್ವೆಸ್ಟ್ ಫುಲ್ ಅಕ್ಯುಪೆನ್ಸಿ ಅಂತ ಹ್ಯಾಶ್ ಟ್ಯಾಗ್ ಹಾಕಿಕೊಂಡು ಕರ್ನಾಟಕ ಸಿಎಂ ಬಿಎಸ್ ವೈ, ಡಿಸಿಎಂ ಅಶ್ವತ್ಥನಾರಾಯಣ್ ಮತ್ತು ಸಚಿವ ಡಾ.ಕೆ. ಸುಧಾಕರ್ಗೆ ಟ್ವೀಟ್ನ್ನು ಟ್ಯಾಗ್ ಮಾಡಿದ್ದಾರೆ.
ಇಂದೇ ಬದಲಾಗುತ್ತಾ ಥಿಯೇಟರ್ ಅಕ್ಯೂಪೆನ್ಸಿ ರೂಲ್ಸ್ ..?
ಸಂಜೆ ಅಥವಾ ನಾಳೆ ವೇಳೆಗೆ ಥಿಯೇಟರ್ ಅಕ್ಯೂಪೆನ್ಸಿ ರೂಲ್ಸ್ ಮರು ಆದೇಶ ಹೊರ ಬಿಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಅಂತ ಫಿಲಂ ಚೇಂಬರ್ ಮನವಿ ಮಾಡಲಿದೆ. ಸರ್ಕಾರದ ಮಾರ್ಗ ಸೂಚಿ ವಿಚಾರ ಮುಂದಿಟ್ಟುಕೊಂಡು ಇಂದು ಫಿಲಂ ಚೇಂಬರ್ ನಲ್ಲಿ ಸಭೆ ನಡೆಯಲಿದೆ. ಪದಾಧಿಕಾರಿಗಳು ಅಧ್ಯಕ್ಷರು ಮಾತುಕತೆ ನಡೆಸಲಿದ್ದಾರೆ. ನಂತರ ಸಿಎಂ ಭೆಟಿ ಮಾಡಿ ಮಾರ್ಗ ಸೂಚಿ ಬದಲಾಯಿಸುವಂತೆ ಒತ್ತಾಯಿಸಲಿದ್ದಾರೆ .
ಸದ್ಯ ಸರ್ಕಾರ ಹೊರಡಿಸಿರೋ ಆದೇಶದಿಂದ ಬೇಸರಗೊಂಡಿರೋ ಗಾಂಧಿನಗರದ ಮಂದಿ. ಕೂಡಲೇ ಮಾರ್ಗ ಸೂಚಿ ಪರಿಶೀಲಿಸಿ 100% ಪ್ರೇಕ್ಷಕರಿಗೆ ಅನುಮತಿ ನೀಡಬೇಕೆಂದು ಸಿಎಂಗೆ ಮನವಿಮಾಡಲಿದ್ದಾರೆ. ಫೆ.19ಕ್ಕೆ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ಸಿನಿಮಾಗೆ ದೊಡ್ಡ ಹೊಡೆತ ಬೀಳುವು ಉದ್ಧೇಶದಿಂದ ದೃವ ಸರ್ಜಾ ಅವರು ನೇರವಾಗಿ ಟ್ವಿಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.