ಸದನದಲ್ಲಿ ಸಿದ್ದು-ಬಿಎಸ್ ವೈ ನಡುವೆ ಮಾತಿನ ಮಲ್ಲಯುದ್ಧ

ಬೆಂಗಳೂರು : ಶಾಸಕರ ಅನುದಾನ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ವೇಳೆ  ಸಿಎಂ, ಹಾಗೂ ಮಾಜಿ ಸಿಎಂ ನಡುವೆ ರಸವತ್ತಾದ ವಾಕ್ಸಮರವೇ ನಡೆಯಿತು.

ಬರೀ ಬಾಯ್ಮಾತಿನಲ್ಲೇ ನೀವು ಹೇಳ್ತೀರಾ, ಆದ್ರೆ ಕೈಯಲ್ಲಿ ಮಾತ್ರ ಏನೂ ಆಗೋದಿಲ್ಲವೆಂದು ವಿಪಕ್ಷ ನಾಯಕ ಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾತಲ್ಲೇ ಛಾಟಿ ಬಿಸಿದರು. ಕೋವಿಡ್ ನಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಅದಕ್ಕೆ ಸ್ವಲ್ಪ ಸಮಸ್ಯೆಯಾಗ್ತಿದೆ. ನಾವೇನು ನೋಟ್ ಪ್ರಿಂಟ್ ಮಾಡ್ತೀವಾ? ನೀವೂ ನೋಟ್ ಪ್ರಿಂಟ್ ಮಾಡೋಕೆ ಆಗುತ್ತಾ ಅಂತ ಸಿದ್ದರಾಮಯ್ಯನವ್ರಿಗೆ ಸಿಎಂ ಬಿಎಸ್ ವೈ ಟಾಂಗ್ ಕೊಟ್ರು. ಇದಕ್ಕೆ ಸಿದ್ದು ನಾನಾಗಿದ್ರೆ ಪ್ರಧಾನಿ ಮನೆ ಮುಂದೆ ಧರಣಿ ಮಾಡ್ತಿದ್ದೆ. ಅಲ್ಲಿಂದ ಬರಬೇಕಾಗಿದ್ದನ್ನ ಪಡೆದುಕೊಳ್ತಿದ್ವಿ ಅಂತ ತಿರುಗೇಟು ನೀಡಿದ್ರು.

ಇಷ್ಟಕ್ಕೆ ಸುಮ್ಮನಾಗದ ಸಿದ್ದು ಹಲವು ಕಾರ್ಯಕ್ರಮಗಳನ್ನೇ ನಿಲ್ಲಿಸಿ ಬಿಟ್ಟಿದ್ದೀರಾ ಅಂತ ಸಿದ್ದರಾಮಯ್ಯ ಕಿಡಿ ಕಾರಿದ್ರು. ವಿದ್ಯಾಸಿರಿ‌ ಇಲ್ಲ, ಪಶುಭಾಗ್ಯ ಇಲ್ಲ, ಕುರಿಗಳು ಸತ್ತರೆ 5 ಸಾವಿರ ಕೊಡ್ತಿದ್ದೆವು, ಅದು ಮುಂದುವರಿಸಿದ್ದೀರಾ? ಅಂತ ಪ್ರಶ್ನೆ ಹಾಕಿದ್ರು. ಶಾದಿಭಾಗ್ಯ ನಿಲ್ಲಿಸಿದ್ದೀರಿ, ಅನ್ನಭಾಗ್ಯದ 2 ಕೆಜಿ ಅಕ್ಕಿಯನ್ನೇ ಕಟ್ ಮಾಡಿದ್ರಿ ಇಂದಿರಾ ಕ್ಯಾಂಟೀನ್ ನಿಲ್ಲಿಸೋಕೆ ಹೊರಟಿದ್ದೀರಾ, ಇದೆಲ್ಲವೂ ಜನಪರ ಕಾರ್ಯಕ್ರಮಗಳಲ್ವೇ? ಯಾಕೆ ಇವನ್ನೆಲ್ಲ ನಿಲ್ಲಿಸ್ತಿರೋದು ಎಂದು ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ತರಾಟೆ ತೆಗೆದುಕೊಂಡರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!