ಕ್ರಿಕೆಟ್ – ಬಾಲಿವುಡ್ ತಾರೆಯರಿಗೆ ಟಾಂಗ್ ಕೊಟ್ಟ ಸೋನಾಕ್ಷಿ ಸಿನ್ಹಾ:
ಮುಂಬೈ : ಈಗಾಗಲೇ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಅಂತರಾಷ್ಟ್ರೀಯ ಮಟ್ಟದ ತಾರೆಗಳ ಮಧ್ಯ ದೊಡ್ಡ ಚರ್ಚೆಯಾಗುತ್ತಿರುವ ಬೆನ್ನಲೇ, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಮನಷ್ಯರಿಗಾಗಿ ಮನುಷ್ಯ ನಿಲ್ಲುವುದು ಮಾನವೀಯತೆ ಎನ್ನುವ ಮೂಲಕ ಕ್ರಿಕೆಟಿಗರು, ಬಾಲಿವುಡ್ ತಾರೆಯರಿಗೆ ಟಾಂಗ್ ಕೊಟ್ಟಿದ್ದಾರೆ.
ಎರಡು ತಿಂಗಳಿನಿಂದಲೂ ನಡೆಯುತ್ತಿರುವ ರೈತ ಪ್ರತಿಭಟನೆ ಮತ್ತು ಅದನ್ನು ನಿರ್ಲಕ್ಷ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಅಂತರರಾಷ್ಟ್ರೀಯ ತಾರೆಯರಿಂದ ಟೀಕೆಗಳು ಕೇಳಿಬಂದಿವೆ. ಆದರೆ, ನಮ್ಮ ದೇಶದ ಕ್ರಿಕೆಟಿಗರು ಹಾಗೂ ಬಾಲಿವುಡ್ ತಾರೆಯರು ರೈತರ ಹೋರಾಟ ಕಡೆಗಣಿಸಿ, ಸರಕಾರವನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದಾರೆ. ಆದರೆ, ಆ ರೀತಿಯ ಟ್ವಿಟ್ ಗೆ ನಟಿ ಸೋನಾಕ್ಷಿ ಸಿನ್ಹಾ ತೀಕ್ಷಣವಾಗಿ ಪ್ರತಿಕ್ರೀಯೆ ನೀಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದನ್ನು ಹಸ್ತಕ್ಷೇಪವೆಂದುಎನ್ನುತ್ತೀರಿ ಏಕೆ? ಮನುಷ್ಯರಿಗಾಗಿ ಮನುಷ್ಯ ನಿಲ್ಲುವದು ಮಾನವೀಯತೆ ಎನ್ನುವ ಮೂಲಕ ಸೋನಾಕ್ಷಿ ಅವರು ರಿಹಾನ್ನ, ಗ್ರೇಟಾ ಅವರ ನಿಲುವನ್ನು ಸಮರ್ಥಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ, ಇಂಟರ್ನೆಟ್ ಸ್ಥಗಿತ ಮತ್ತು ಅಭಿವ್ಯಕ್ತಿಯ ನಿಗ್ರಹಗಳು, ಪ್ರಭುತ್ವದ ಪ್ರೊಪಗಂಡಾ, ದ್ವೇಷದ ಮಾತು ಮತ್ತು ಅಧಿಕಾರ ದುರುಪಯೋಗದ ವಿರುದ್ಧ ಈ ಧ್ವನಿಗಳು ವ್ಯಕ್ತವಾಗಿವೆ ಎಂದು ಸೋನಾಕ್ಷಿ ಸಿನ್ಹಾ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ನಮ್ಮ ದೇಶದ ಕಾರ್ಯಚಟುವಟಿಕೆಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ನಿಮ್ಮನ್ನು ನಂಬಿಸಲು ಸುದ್ದಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನೀವು ನೆನಪಿಡಿ ಟೀಕಿಸಿದವರ್ಯಾರೂ ಅನ್ಯಗ್ರಹ ಜೀವಿಗಳಲ್ಲ. ಮತ್ತೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಸಹಜೀವಿ ಮನುಷ್ಯರು ಅವರು. ಇವೆರಡು ಭಿನ್ನ ಚರ್ಚೆಗಳು. ನೀತಿ, ಕಾಯ್ದೆ, ಕಾನೂನು ಮತ್ತು ಅವುಗಳ ಪರಿಣಾಮದ ಮೇಲೆ ನಿಮಗೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಆ ಭಿನ್ನಾಭಿಪ್ರಾಯವನ್ನು ಅನ್ಯ ವಾದಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಡಿ. ಟೀಕೆ ಇರುವುದು ಮಾನವ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಹರಣದ ಬಗ್ಗೆ ಎಂದು ಸೋನಾಕ್ಷಿ ಬರೆದಿದ್ದಾರೆ.
ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಅಂತರ್ಜಾಲವನ್ನು ನಿಷೇಧಿಸಲಾಗಿದೆ. ಪ್ರಭುತ್ವ ಮತ್ತು ಮಾಧ್ಯಮಗಳ ಪ್ರೊಪಗಂಡಾ ಮೂಲಕ ಪ್ರತಿಭಟನಾಕಾರರನ್ನು ಕೆಣಕಲಾಗುತ್ತಿದೆ. ದ್ವೇಷದ ಮಾತು (ದೇಶ್ ಕೆ ಗದ್ದಾರೊಂ ಕೊ, ಗೋಲಿ ಮಾರೊ ಸರ್ದಾರೊ ಕೊ ಈಗ ಚಾಲ್ತಿಗೆ ಬಂದಿದೆ) ಪ್ರವರ್ಧಮಾನಕ್ಕೆ ಬರುತ್ತಿದೆ. ಈ ವಿಷಯವೆ ಜಾಗತಿಕ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ ಎಂದು ಅವರು ಬರೆದಿದ್ದಾರೆ.