ಮುಂಬೈ. ಪ್ರೀತಿ ಕುರುಡು ಅಂತಾರೆ ಅದೇ ಕಾರಣಕ್ಕೊ ಏನೋ, ಪ್ರೀತಿಸಿದ ಹುಡಗನ ಮಾತುಗಳನ್ನ ನಂಬಿ ಯುವತಿಯೊಬ್ಬಳು ಮೋಸ ಹೋಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುಂಬೈನ ನಿವಾಸಿ ಯುವತಿ ತನ್ನ ಪ್ರಿಯಕರ ವಿಶ್ರಾಮಿಸಲು ಮನೆ ಕೀಯನ್ನ ಕೊಟ್ಟಿದ್ಲಂತೆ. ಆದ್ರೆ ಯುವತಿ ಹಾಗೂ ಮನೆಯವರೆಲ್ಲ ಟ್ರಿಪ್ಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಬರೋಬ್ಬರಿ 13 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿ ಪರಾರಿಯಾಗಿದ್ದಾನೆ ವಂಚಕ ಪ್ರಿಯತಮ.ಇತ್ತ ಯುವತಿ ಹಾಗೂ ಕುಟುಂಬಸ್ಥರು ಟ್ರಿಪ್ ಮುಗಿಸಿ ಮನೆಗೆ ವಾಪಸ್ಸಾದಾಗ ಶಾಕ್ ಆಗಿದ್ದಾರೆ.
ಐನಾತಿ ಆರೋಪಿ ಪ್ರಿಯತಮೆಯ ಮನೆಯನ್ನ ಗುಡುಸಿ ಗುಂಡಾಂತರ ಮಾಡಿ ಎಸ್ಕೇಪ್ ಆಗಿದ್ದಾನೆ. ಟ್ರಿಪ್ ನಿಂದ ವಾಪಸ್ ಬಂದ ನಂತರ ಕುಟುಂಬಸ್ಥರು ಈ ಸಂಬಂಧ ಕೊಲಾಬಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ವೇಳೆ ಯುವತಿ ತನ್ನ ಪ್ರಿಯಕರನಿಗೆ ಮನೆ ಕೀ ಕೊಟ್ಟಿರುವ ವಿಚಾರ ತಿಳಿದು ಬಂದಿದೆ. ಇದೀಗ ಪರಾರಿಯಾಗಿರುವ ವಂಚಕನ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.