ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಬೆಂಬಲಿಗರ ಮೇಲೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಮರ ಸಾರಿದಂತೆ ಕಾಣುತ್ತಿದೆ.
ರಮ್ಯಾ ಟ್ವೀಟ್ ಬೆನ್ನಲ್ಲೇ ಇಷ್ಟು ದಿನ ರಮ್ಯಾ ಎಲ್ಲಿದ್ದರೂ, ಈಗ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ ಎಂದು ಪ್ರಶ್ನಿಸಿದ್ದ ಮೊಹಮದ್ ನಲಪಾಡ್ಗೆ ತಿರುಗೇಟು ನೀಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಹುಡುಗ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ : – ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿಗೆ ಒಬಿಸಿ ಮೀಸಲಾತಿ ಬೇಕು – ಸಿಎಂ ಬೊಮ್ಮಾಯಿ
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಜಾಮೀನಿನ ಮೇಲೆ ಹೊರಗಿರುವ ಈ ಹುಡುಗ ಮೊಹಮದ್ ನಲಪಾಡ್, ಕರ್ನಾಟಕ ಯುವ ಕಾಂಗ್ರೆಸ್ನ ಗೌರವಾನ್ವಿತ ಅಧ್ಯಕ್ಷರು, ಶಾಸಕ ಎನ್ಎ ಹ್ಯಾರಿಸ್ ಅವರ ಪುತ್ರ. ಅವರು ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಇದು ಅದ್ಭುತ ಎಂದಿದ್ದಾರೆ. ಅದಲ್ಲದೇ ನಲಪಾಡ್ ವಿರುದ್ಧ ಕೇಳಿಬಂದಿರುವ ಆರೋಪಗಳ ವರದಿಗಳನ್ನು ಕೂಡ ಲಗತ್ತಿಸಿದ್ದಾರೆ.
ಇದನ್ನೂ ಓದಿ : – ಉದಯಪುರದಲ್ಲಿ ಇಂದಿನಿಂದ 3 ದಿನ ಕಾಂಗ್ರೆಸ್ ನವ ಸಂಕಲ್ಪ ಶಿಬಿರ