ಪವರ್ ಸ್ಟಾರ್ ಡಾ.ಪುನಿತ್ ರಾಜ್ ಕುಮಾರ್ ನಟಿಸಿರುವ ಜೆಮ್ಸ್ ಚಿತ್ರ ಇಂದು ತೆರೆ ಕಂಡಿದೆ. ರಾಯಚೂರು ಜಿಲ್ಲೆಯಾದ್ಯಂತ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಅಪ್ಪುವಿನ ಅಭಿಮಾನಿಗಳು, ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದರು.
ಬೈಕ್ ಮೂಲಕ ಮೆರವಣಿಗೆ ನಡೆಸಿ, ತಿಮ್ಮಾಪುರ ಪೇಟೆಯಿಂದ ಅಪ್ಪು ವೃತ್ತದವರೆಗೆ ಮೆರವಣಿಗೆ ನಡೆಸಿದರು. ಟಿಕೆಟ್ ಪಡೆಯುವ ವೇಳೆ ನೂಕುನುಗ್ಗಲು ಉಂಟಾಯಿತು.ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಹೈರಾಣಾಗಿ, ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.