ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಎಸ್ ಬಿಐ ಬ್ಯಾಂಕಿನ ಎಟಿಎಂನಲ್ಲಿ ಕಳೆದ ಒಂದು ತಿಂಗಳಿನಿಂದ ಬರೀ ಹರಿದ ನೋಟುಗಳು ಬರುತ್ತಿದ್ದು, ಗ್ರಾಮಸ್ಥರಿಗೆ ತಲೆನೋವಾಗಿದೆ ಪರಿಣಮಿಸಿದೆ.
ಪ್ರತಿ ಬಾರಿ ಹಣ ಡ್ರಾ ಮಾಡುವಾಗ 500 ರೂ. ಮುಖಬೆಲೆಯ ಹರಿದ, ತುಂಡಾದ ಅಥವಾ ತೇಪೆ ಹಚ್ಚಿದ ನೋಟುಗಳು ಬರುತ್ತಿವೆ. ಹರಿದ ನೋಟುಗಳಿಂದ ಗ್ರಾಹಕರು ಕಂಗಾಲಾಗಿದ್ದು, ಕೈಯಲ್ಲಿ ಹಣವಿದ್ರೂ ಪುನಃ ಬ್ಯಾಂಕಿಗೆ ಹೋಗಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುತ್ತಲಿನ ಏಳೆಂಟು ಹಳ್ಳಿಯ ನಡುವೆ ಇದೊಂದೆ ಎಟಿಎಂ ಇರೋದರಿಂದ ಅದೆಷ್ಟೇ ಬಾರಿ ಈ ಬಗ್ಗೆ ಬ್ಯಾಂಕ್ ನವರಿಗೆ ಹೇಳಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತಿದ್ದಾರೆ ಸ್ಥಳಿಯರು. ಡಂಬಳ ಎಟಿಎಂ ಹೊರತು ಪಡಿಸಿದ್ರೆ ೨೭ ಕಿಲೋಮೀಟರ್ ಗದಗ ಬರಬೇಕು ಇಲ್ಲವೇ 24 ಕಿ.ಲೋ. ಮುಂಡರಗಿ ಗೆ ಹೋಗಬೇಕು. ಹೀಗಾಗಿ ಗ್ರಾಮೀಣ ಜನರಿಗಾಗುವ ಈ ಸಮಸ್ಯೆ ಬಗೆಹರಿಸಿ ಅಂತ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.