ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಪಾನಮತ್ತ ಯುವತಿಯ ಮೇಲೆ ಉಬರ್ ಕ್ಯಾಬ್ ಚಾಲಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 2 ಗಂಟೆಗೆ ಮುರುಗೇಶ್ ಪಾಳ್ಯಕ್ಕೆ ಕ್ಯಾಬ್ ಬುಕ್ ಮಾಡಿದ್ದ ಉತ್ತರ ಪ್ರದೇಶ ಮೂಲದ ಯುವತಿ ಮೇಲೆ ಡ್ರಾಪ್ ಲೊಕೇಷನ್ ನಲ್ಲಿ ಚಾಲಕ ಅತ್ಯಾಚಾರ ಎಸಗಿದ್ದಾರೆ ಎಂದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಚ್ ಎಸ್ ಆರ್ ಲೇಔಟ್ ನಿಂದ ಕ್ಯಾಬ್ ಬುಕ್ ಮಾಡಿದ್ದ ಯುವತಿ ಪಾನಮತ್ತಳಾಗಿದ್ದು, ಡ್ರಾಪ್ ಲೊಕೇಷನ್ ನಲ್ಲಿ ಇಳಿಯಲು ಆಗದ ಸ್ಥಿತಿಯಲ್ಲಿದ್ದಳು. ಇದರ ಲಾಭ ಪಡೆದ ಚಾಲಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.