ಮರದ ಮೇಲೆ ಒಂದು ಚಿರತೆ ಎರಡು ಬಾಲ ಇರುವ ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಚಿರತೆ ಒಂದಾದರೆ ಬಾಲ ಎರಡು ಹೇಗೆ ಎಂದು ಪ್ರಶ್ನೆ ಕಾಡುತ್ತಿದ. ಸಹಜವಾಗಿ ಇನ್ನೊಂದು ಚಿರತೆ ಜೊತೆಗಿದೆ ಎಂಬುದು ಇದರರ್ಥ.
ನಿಜ. ಹೌದು, ಈ ಮರದ ಮೇಲೆ ಎರಡು ಚಿರತೆಗಳಿವೆ. ಒಂದು ತಾಯಿ ಮತ್ತೊಂದು ಅದರ ಮರಿ. ಹಾಗಾಗಿ ಎರಡು ಬಾಲ ಕಾಣಿಸಿಕೊಂಡಿದೆ. ಆದರೆ ಮರಿ ಎಲ್ಲಿದೆ ಎಂಬುದು ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರ ತಲೆಗೆ ಹುಳ ಬಿಡಲಾಗಿದೆ.
ಹೌದು, ಈ ಮರದಲ್ಲಿ ಚಿರತೆ ಜೊತೆಗೆ ಅದರ ಮರಿಯ ಮುಖವೂ ಇದೆ. ಆದರೆ ಎಲ್ಲಿ ಎಂಬುದೇ ಪ್ರಶ್ನೆ. ಕೆಲವರು ಈ ಮರಿಯನ್ನು ಹುಡುಕಿ ತಮ್ಮ ದೃಷ್ಟಿ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ನೀವೂ ಹುಡುಗಿ ನಿಮ್ಮ ಕಣ್ಣಿನ ಪರೀಕ್ಷೆ ಮಾಡಿಕೊಳ್ಳಬಹುದು.
ಫೋಟೋಗ್ರಾಫರ್ ಮೋಹನ್ ಥಾಮಸ್ ಸೆರೆ ಹಿಡಿದ ಈ ಚಿತ್ರವನ್ನು ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವನ್ ತಮ್ಮ ಟ್ವಿಟರ್ ನಲ್ಲಿ ಈ ಫೋಟೊ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಎಷ್ಟು ಚಿರತೆಗಳಿವೆ ಎಂದು ಸವಾಲು ಹಾಕಿದ್ದಾರೆ.