ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ ಘಟನೆ ಶಿವಮೊಗ್ಗ ತಾಲೂಕು ಆಯನೂರು ಬಳಿ ಬೆಳಗಿನ ಜಾವ ಘಟನೆ ಸಂಭವಿಸಿದೆ.
ಲಾರಿ ಕ್ಯಾಬಿನ್’ನಲ್ಲಿ ಸಿಕ್ಕಿಬಿದ್ದ ಕ್ಲೀನರ್ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡು ಕಾಲುಗಳಿಗೂ ಗಂಭೀರ ಗಾಯವಾಗಿದೆ. ಶಿಶಿವಮೊಗ್ಗದ ಶಿಮುಲ್ ಹಾಲಿನ ಡೈರಿಯಿಂದ ಸಾಗರ ತಾಲೂಕಿಗೆ ಹಾಲು ಪೂರೈಕೆ ಮಾಡಲು ಕ್ಯಾಂಟರ್ ಲಾರಿ ತೆರಳುತಿತ್ತು.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗದ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ, ಕಟರ್’ಗಳನ್ನ ಬಳಸಿ ಕ್ಲೀನರ್ ಸಂತೋಷ್ನ ರಕ್ಷಣೆ ಮಾಡಿದ್ದಾರೆ. ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.