ರಾಜಧಾನಿಯಲ್ಲಿ ಶುರುವಾಗಿದೆ ವ್ಯಾಲೆಂಟೈನ್ಸ್ ವೀಕ್ ಫೀವರ್..!


ಬೆಂಗಳೂರು: ನೋಡ್ತಾ ನೋಡ್ತಾ ವ್ಯಾಲೆಂಟೈನ್ಸ್ ವೀಕ್ ಶುರು ಆಗ್ಬಿಟ್ಟಿದೆ. ಅದು ಅಲ್ದೆ ಇವತ್ತು ರೋಸ್ ಡೇ ಬೇರೆ ಯುವಪ್ರೇಮಿಗಳೆ ತುಂಬಿರೊ ರಾಜಧಾನಿಯಲ್ಲಂತು ಗುಲಾಬಿ ಲೋಕವೆ ಸೃಷ್ಟಿಯಾಗಿದೆ. ಸಿಲಿಕಾನ್ ಸಿಟಿಯ ಹೂವಿನ ಮಾರ್ಕೆಟ್ ಗಳಲ್ಲಿ ಗುಲಾಬಿಯದೆ ಹವಾ.
ಪ್ರೇಮಿಗಳಿಗೆ ಈ ವ್ಯಾಲೆಂಟೈನ್ಸ್ ವೀಕ್ ಪ್ರೇಮಲೋಕವನ್ನೆ ಹೊತ್ತು ತರತ್ತೆ. ಅದ್ರಲ್ಲು ವ್ಯಾಲೆಂಟೈನ್ಸ್ ವಾರದ ಮೊದಲ ದಿನ ರೋಸ್ ಡೇ ಅಂತಾ ಆಚರಿಸಲಾಗತ್ತೆ. ಪ್ರಪೋಸ್ ಮಾಡ್ಬೇಕು ಅನ್ಕೊಂಡಿರೋರಿಗೆ, ಈಗಾಗ್ಲೇ ಪ್ರಪೋಸ್ ಮಾಡಿರೋರಿಗೆ ಗುಲಾಮಿ ü ಹೂ ಎಲ್ಲದರಲ್ಲು ಸ್ಪೆಷಲ್. ಅದೆಷ್ಟೇ ಬಣ್ಣದ, ಅದೆಷ್ಟೇ ವೆರೈಟಿ ಹೂಗಳಿದ್ರು ಗಮನ ಸೆಳೆಯೋದು ಗುಲಾಭಿ. ಅಂತಾ ಗುಲಾಭಿ ಲೋಕ ಬೆಂಗಳೂರಲ್ಲಿ ಸೃಷ್ಟಿಯಾಗಿದೆ.
ಕಣ್ ಸೆಳೆಯೊ ಕೆಂಗುಲಾಭಿ, ವಾವ್ ಅನ್ಸೊ ಶ್ವೇತ ಗುಲಾಭಿ, ಎಕ್ಸಲೆಂಟ್ ಅನ್ಸೋ ಯೆಲ್ಲೋ ರೋಸ್ ಇವೆಲ್ಲಾ ವ್ಯಾಲೆಂಟೈನ್ಸ್ ಸ್ಪೆಷಲ್. ತಮ್ಮ ಪ್ರೀತಿ ಪಾತ್ರರಿಗೆ ಹಲವಾರು ಕಾಸ್ಟಿ÷್ಲ ಗಿಫ್ಟ್ ಕೊಡ್ಸುದ್ರು ಅದ್ರ ಜೊತೆ ಒಂದು ಗುಲಾಭಿ ಇಲ್ಲ ಅಂದ್ರೆ ಅದು ವ್ಯಾಲೆಂಟೈನ್ ಗಿಫ್ಟ್ ಅಂತಾ ಅನ್ಸೋದೆ ಇಲ್ಲಾ. ವ್ಯಾಲೆಂಟೈನ್ಸ್ ಡೇ ಕೌಂಟ್ ಡೌನ್ ಶುರುವಾಗ್ತಿದ್ದಂಗೆ ಸಿಲಿಕಾನ್ ಸಿಟಿಯಲ್ಲಿ ಗುಲಾಭಿ ಹೂಗಳು ಮನೆ ಮಾಡಿ ಕುಳಿತಿವೆ.
ಇವತ್ತು ರೋಸ್ ಡೇ ಬೇರೆ, ನಗರದ ಹಲವಾರು ಮಾರ್ಕೆಟ್ ನಲ್ಲಿ ಗುಲಾಭಿ ಹೂಗಳದ್ದೆ ಸದ್ದು. ವ್ಯಾಲೆಂಟೈನ್ಸ್ ಡೇ ಗು ಮುಂಚೆನೆ ರೋಸ್ ಗಳಿಗೆ ಹೆವಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಧ್ಯ ಒಂದು ಗುಲಾಭಿ ೧೫ರಿಂದ ೨೦ರೂಪಾಯಿಗೆ ಮಾರಾಟವಾಗ್ತಿದೆ. ಫೆಬ್ರವರಿ ೧೪ರಂದು ಅಂದ್ರೆ ಪ್ರೇಮಿಗಳ ದಿನದಂದು ಮತ್ತಷ್ಟು ಹೆಚ್ಚಾಗ್ಬೋದು ಅಂತಿದ್ದಾರೆ ವ್ಯಾಪಾರಿಗಳು.
ಪ್ರೀತಿಯ ಸಂಕೇತ ರೆಡ್ ರೋಸ್. ಯಾವ್ದೇ ಗಿಫ್ಟ್ ಕೊಟ್ರು ಹೆಂಗಳೆಯರ ಮುಖದಲ್ಲಿ ನಗು ಮೂಡಿಸೋದು ಸಿಂಪಲ್ ಗುಲಾಭಿ ಮಾತ್ರ. ಹೀಗಾಗಿ ನಿಮ್ ಹುಡ್ಗ ಅಥ್ವಾ ಹುಡ್ಗಿಗೆ ಯಾವ್ ಗಿಫ್ಟ್ ಕೊಡ್ಬೇಕು ಅನ್ನೋದನ್ನ ಈಗ್ಲೇ ಡಿಸೈಡ್ ಮಾಡ್ಕೋಳಿ. ಅದ್ರ ಜೊತೆ ಗುಲಾಭಿ ಕೊಡೋದನ್ನ ಮಾತ್ರ ಮರಿಬೇಡಿ.