ಸಚಿವರನ್ನು ಸ್ವಾಗತಿಸುವ ವೇಳೆ ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆ ಮೇಲೆ ಕಾರೊಂದು ಹರಿದು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ದೆಹಲಿಯಿಂದ ಸೋಮವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ವಿಮಾನ ನಿಲ್ದಾಣದ ಬಳಿ ಸ್ವಾಗತಿಸುವ ವೇಳೆ ಈ ಅವಘಡ ಸಂಭವಿಸಿದೆ.
ವಿಮಾನ ನಿಲ್ದಾಣದ ರಸ್ತೆಯ ಟೋಲ್ ಗೇಟ್ ಬಳಿ ಜನರನ್ನು ನಿಯಂತ್ರಣ ಮಾಡಲು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಹರಿದಿದ್ದರಿಂದ ಚಿಕ್ಕಜಾಲ ಪೋಲಿಸ್ ಠಾಣೆಯ ಸಿಬ್ಬಂದಿ ಶಿವಕುಮಾರ್ ಕಾಲಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿಯನ್ನು ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.