ಬೆಂಗಳೂರು: ಏಲಕ್ಕಿ ಸೇವನೆಯಿಂದ ಸಾಕಷ್ಟು ಪ್ರಯೋಜನೆಗಳಿವೆ. ಏಲಕ್ಕಿಯಲ್ಲಿರುವ ಪೋಷಕಾಂಶಗಳು ನಿಮ್ಮನ್ನು ನಿಬ್ಬೆರಗಾಗಿಸುತ್ತವೆ. ಏಲಕ್ಕಿ ಹಲವು ರೋಗಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಹೊಂದಿದೆ.

ಏಲಕ್ಕಿ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಏಲಕ್ಕಿ ಸೇವನೆಯಿಂದ ಬಾಯಿಯ ದುರ್ಗಂಧವನ್ನು ತೊಲಗಿಸಬಹುದು. ಜಗತ್ತಿನಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಏಲಕ್ಕಿ ಬೆಳೆಯುವ ದೇಶ ಗ್ವಾಟೆಮಾಲಾ. ಈ ಏಲಕ್ಕಿಗಳು ಹಸಿರಾಗಿದ್ದು ದೊಡ್ಡ ದಾಗಿದ್ದರೆ ಇದರ ಬಳಿಕದ ಸ್ಥಾನ ಪಡೆಯುವ ಭಾರತ ಮತ್ತು ಶ್ರೀಲಂಕಾ.

ಏಲಕ್ಕಿಯಲ್ಲಿ ಉತ್ತಮ ಪ್ರಮಾಣದಲ್ಲಿ ವಿವಿಧ ಖನಿಜಗಳು, ಗಂಧಕ, ಕ್ಯಾಲ್ಶಿಯಂ, ವಿಟಮಿನ್ಗಳಿವೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಅಲ್ಲದೇ, ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಏಲಕ್ಕಿ ಸೇವನೆಯಿಂದ ಮುಪ್ಪು ಬೇಗನೇ ಬರುವುದಿಲ್ಲ.

ಪ್ರತಿದಿನ ಏಲಕ್ಕಿ ನೀರನ್ನು ಕುದಿಸಿ ಕುಡಿಯಿರಿ. ಈ ಪಾನೀಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಏಲಕ್ಕಿ ಅಗಿಯುವುದರಿಂದ ಶ್ವಾಸಕೋಶದ ಸಂಕೋಚನ ಮತ್ತು ಆಸ್ತಮಾದ ಸಮಸ್ಯೆಯನ್ನು ದೂರ ಮಾಡುತ್ತದೆ.

ತೂಕ ಮತ್ತು ಬೊಜ್ಜು ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಏಲಕ್ಕಿ ಸೇರಿಸಿ. ಏಲಕ್ಕಿಯಲ್ಲಿರುವ ಪದಾರ್ಥಗಳು ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಪರಿಮಳದ ಮೂಲಕ ರೋಗವನ್ನು ನಿವಾರಿಸುವ ವಿಧಾನವಾದ ಆರೋಮಾಪಥಿಯಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ.

ಸ್ಮರಣ ಶಕ್ತಿಯ ತೊಂದರೆ ಇರುವವರು, ದೇಹದಲ್ಲಿ ಕಲ್ಮಶದ ಪ್ರಮಾಣ ಹೆಚ್ಚಿರುವವರಿಗೆ ಏಲಕ್ಕಿ ಹೆಚ್ಚಿನ ನೆರವು ನೀಡುತ್ತದೆ.