ಗೋಮಾಂಸ ನಿಷೇಧ ಹಿನ್ನೆಲೆ: ಆಹಾರಕ್ಕಾಗಿ ಪ್ರಾಣಿಗಳ ಪರದಾಟ..!

ಬಳ್ಳಾರಿ: ರಾಜ್ಯದಲ್ಲಿ ಗೋಮಾಂಸ ನಿಷೇಧ ಹಿನ್ನೆಲೆ ಹೋಸಪೇಟೆ ತಾಲೂಕಿನ ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್ ನಲ್ಲಿರುವ ಸಿಂಹ, ಹುಲಿಗಳು ದನದ ಮಾಂಸವಿಲ್ಲದೆ ಆಹಾರಕ್ಕಾಗಿ ಪರದಾಡುತ್ತೆವೆ. ಮೃಗಾಲಯದ ಅಧಿಕಾರಿಗಳು ಕಳೆದೊಂದು ತಿಂಗಳಿಂದ ದನದ ಮಾಂಸಕ್ಕೆ ಹೊಂದಿಕೊಂಡಿರುವ ಪ್ರಾಣಿಗಳಿಗೆ ಕೋಳಿ ಮಾಂಸ ತಂದು ಹಾಕುತಿದ್ದಾರೆ. ಆದರೆ, ಆ ಪ್ರಾಣಿಗಳು ಕೋಳಿ ಮಾಂಸ ತಿನ್ನುತ್ತಿಲ್ಲ. ಇದರಿಂದಾಗಿ ಪಾರ್ಕ್ ನಲ್ಲಿರುವ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಹಂಪಿಯ ಪಕ್ಕದಲ್ಲಿರುವ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್ನಲ್ಲಿ ಸಿಂಹ, ಹುಲಿ, ಗುಳ್ಳೆ ನರಿ, ಕತ್ತೆ ಕಿರುಬ, ತೋಳ ಪ್ರಾಣಿಗಳು ಸೇರಿ ಮೃಗಾಲಯದಲ್ಲಿ ಒಟ್ಟು 34 ಕ್ಕೂ ಹೆಚ್ಚು ಮಾಂಸಹಾರಿ ಪ್ರಾಣಿಗಳಿದ್ದು, ಅವುಗಳಲ್ಲಿ ಕೆಲ ಪ್ರಾಣಿಗಳಿಗೆ ಈ ಮುಂಚೆ ಗಂಡು ಹುಲಿಗೆ ದಿನಕ್ಕೆ 10 ಕೆಜಿ ಹಾಗೂ ಹೆಣ್ಣು ಹುಲಿಗೆ 8 ಕೆಜಿ ದನದ ಮಾಂಸ ನೀಡಲಾಗುತ್ತಿತ್ತು. ಈಗ ಕೋಳಿ ಮಾಂಸ ನೀಡಲಾಗುತ್ತಿದ್ದು, ಈ ಹೊಸ ಆಹಾರ ಪದ್ಧತಿಗೆ ಪ್ರಾಣಿಗಳು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಲ್ಲದೇ ಮಾಂಸಹಾರಿ ಮೂಕ ಪ್ರಾಣಿಗಳಿಗಳು ತುತ್ತು ಆಹಾರಕ್ಕೂ ಪರದಾಡುವಂತಾಗಿದೆ. ಸರ್ಕಾರದ ಈ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಎಲ್ಲಾ ಮೃಗಾಲಯಗಳಿಗೆ ಅನ್ವಯಿಸುವುದು ಬೇಡ. ಇದರಿಂದಾಗಿ ಸರ್ಕಾರವೇ ಪ್ರಾಣಿಗಳ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಪ್ರಾಣಿಗಳ ಉಳಿವಿಗಾಗಿ ಮೃಗಾಲಯಗಳಿಗೆ ಈ ಕಾನೂನಿನಿಂದ ವಿನಾಯಿತಿ ಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.