ಈ ನಾಲ್ಕು ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ..!

ನವದೆಲಹ;ಲಿ : ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಮತ್ತು ಸರ್ಕಾರಿ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನದ ಅಡಿಯಲ್ಲಿ ಕೇಂದ್ರ ಸರ್ಕಾರವು ಮಧ್ಯಮ ಗಾತ್ರದ ನಾಲ್ಕು ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಕ್ಕೆ ಮುಂದಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ಗಳನ್ನು ಖಾಸಗಿಕರಣ ಮಾಡಲಿದೆ ಎನ್ನಲಾಗಿದೆ.
ಏಪ್ರಿಲ್ ನಲ್ಲಿ ಆರಂಭವಾಗುವ 2021/2022ರ ಆರ್ಥಿಕ ವರ್ಷದಲ್ಲಿ ಈ ಎರಡು ಬ್ಯಾಂಕ್ ಗಳನ್ನು ಮಾರಾಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಸಣ್ಣ ಸಣ್ಣ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮುಂಬರುವ ದಿನಗಳಲ್ಲಿ ದೇಶದ ಕೆಲವು ದೊಡ್ಡ ಬ್ಯಾಂಕ್ ಗಳ ಮೇಲೂ ಇದು ಗಮನ ಹರಿಸಲಿದೆ ಎಂದಿದ್ದಾರೆ.
ಗ್ರಾಮೀಣ ಸಾಲ ಗಳನ್ನು ವಿಸ್ತರಿಸುವ ಂತಹ ಉಪಕ್ರಮಗಳನ್ನು ಜಾರಿಗೆ ತರಲು ‘ಆಯಕಟ್ಟಿನ ಬ್ಯಾಂಕ್’ ಎಂದು ಪರಿಗಣಿಸಲಾಗಿರುವ ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸರ್ಕಾರ ವು ಹೆಚ್ಚಿನ ಪಾಲು ಹೊಂದಲಿದೆ.
ಖಾತೆದಾರರಿಗೆ ಯಾವುದೇ ನಷ್ಟವಿಲ್ಲ :
ಬ್ಯಾಂಕುಗಳ ವಿಲೀನ ಅಥವಾ ಖಾಸಗೀಕರಣದಿಂದ ಖಾತೆದಾರರಿಗೆ ಯಾವುದೇ ನಷ್ಟವಿಲ್ಲ. ಖಾತೆದಾರರ ಸಂಪೂರ್ಣ ಮೊತ್ತವನ್ನು ವಿಲೀನಗೊಂಡ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತದೆ. ಖಾತೆದಾರರ ಪಾಸ್‌ಬುಕ್ (Passbook), ಚೆಕ್‌ಬುಕ್ (cheque book), ಬ್ಯಾಂಕ್ ಅಪ್ಲಿಕೇಶನ್, ಐಎಫ್‌ಎಸ್‌ಸಿ ಕೋಡ್ (IFSC code) ಅನ್ನು ಮಾತ್ರ ಬದಲಾಯಿಸಲಾಗುತ್ತದೆ. ಗ್ರಾಹಕರ ಠೇವಣಿಯ ಮೇಲೆ ಯಾವುದೇ ಪರಿಣಾಮವಿಲ್ಲ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು (Bank) ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮಗಳು ವಿಭಿನ್ನವಾಗಿವೆ