ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾದ ನೂತನ ಮಾರ್ಗಸೂಚಿ ಕುರಿತು ಡಿಜಿಟಲ್ ಮೀಡಿಯಾ ಪಬ್ಲಿಷರ್ಸ್, ಡಿಜಿಟಲ್ ನ್ಯೂಸ್ ಮೀಡಿಯಾ ಮತ್ತು ಓಟಿಟಿಗಳು 15 ದಿನಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರಕಾರ ಗಡುವು ನೀಡಿದೆ.
ಡಿಜಿಟಲ್ ವೇದಿಕೆಗಳಲ್ಲಿ ಮಾಹಿತಿ ಹಂಚಿಕೆ ಕುರಿತು ನೀತಿ ಸಂಹಿತೆ ಹಾಗೂ ಸುದ್ದಿ ಪ್ರಸಾರದಲ್ಲಿನ ಮೂರು ಸ್ತರಗಳಲ್ಲಿ ಗಮನ ಹರಿಸುವಿಕೆ ಹಾಗೂ ಉದ್ದಿಮೆಯ ಸ್ಪರ್ಶ ನೀಡುವಿಕೆ ಹಾಗೂ ಡಿಜಿಟಲ್ ಮಾಧ್ಯಮದ ಮೂಲಕ ಓಟಿಟಿ ನೀಡುವ ಬಗ್ಗೆ ಕೇಂದ್ರ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿತ್ತು.
ದೂರು ಬಂದ 24 ಗಂಟೆಯೊಳಗಾಗಿ ಮಹಿಳೆಯ ನಗ್ನ ಚಿತ್ರ ಹಾಗೂ ಮಂಕುಗೊಳಿಸಿದ ಫೋಟೊಗಳನ್ನು ತೆಗೆಯುವುದು ಸೇರಿದಂತೆ ಹಲವು ವಿಷಯಗಳನ್ನು ನೂತನ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.