ಉನ್ನತ ಶಿಕ್ಷಣ ಸಾಮಾನ್ಯಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬೆಂಗಳೂರಿನ 9 ಹಾಗೂ ಮೈಸೂರಿನ ಒಬ್ಬ ವಿದ್ಯಾರ್ಥಿ ರ್ಯಾಂಕ್ ಪಡೆದಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಸೋಮವಾರ ಫಲಿತಾಂಶ ಪ್ರಕಟಿಸಿದ್ದು, ಮೈಸೂರಿನ ಎಚ್.ಕೆ. ಮೇಘನ್ ಎಲ್ಲಾ ವಿಭಾಗಗಳಲ್ಲೂ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇಂಜಿನಿಯರಿಂಗ್, ನ್ಯಾಚೊರೋಪತಿ, ಕೃಷಿ, ಪಶು ವೈದ್ಯಕೀಯ, ವಿಜ್ಞಾನ, ಯೋಗಿಕ್ ಸೈನ್ಸ್ ನಲ್ಲೂ ಮೇಘನ್ ಟಾಙಪರ್ ಆಗಿ ಹೊರಹೊಮ್ಮಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನಡೆದ ಸಿಇಟಿ ಪರೀಕ್ಷೆ ನಡೆದಿದ್ದು, 2 ಲಕ್ಷದ 1 ಸಾವಿರದ 834 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 1 ಲಕ್ಷದ 93 ಸಾವಿರದ 413 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಅವರು ವಿವರಿಸಿದರು.