ಕೆಳ ಕ್ರಮಾಂದಲ್ಲಿ ಚಾಮಿಕಾ ಕರುಣಾರತ್ನೆ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಸಾರಥ್ಯದ ಭಾರತ ತಂಡಕ್ಕೆ 263 ರನ್ ಗಳ ಗುರಿ ಒಡ್ಡಿದೆ.
ಕೊಲಂಬೊದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತು.
ಲಂಕಾ ತಂಡದ ಚಾಮಿಕಾ ಕರುಣಾರತ್ನೆ 49 ರನ್ ಗಳಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು. ನಾಯಕ ದಶುನ್ ಶನಕ (39), ಚಾರಿತ್ ಅಸ್ಲಾಂಕಾ (38) ಮತ್ತು ಆರಂಭಿಕ ಅವಿಷ್ಕಾ ಫೆರ್ನಾಂಡೊ (32) ತಂಡದ ಪರ ಉತ್ತಮ ಹೋರಾಟ ನಡೆಸಿದರು.
ಭಾರತದ ಪರ ದೀಪಕ್ ಚಾಹರ್, ಯಜುರ್ವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಲಾ 2 ಹಾಗೂ ಕೃನಾಲ್ ಪಾಂಡ್ಯ ಒಂದು ವಿಕೆಟ್ ಗಳಿಸಿದರು.