ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ತಲೆ ಎತ್ತಿದೆ.
ಸುಮಾರು 60 ಅಡಿ ಎತ್ತರದ ಈ ಚಾಮುಂಡೇಶ್ವರಿ ವಿಗ್ರಹ 35 ಸಾವಿರ ಕೆ.ಜಿ ತೂಕವುಳ್ಳದ್ದಾಗಿದೆ. ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು, ತಾಂಮ್ರದಿಂದ ವಿಗ್ರಹ ತಯಾರು ಮಾಡಲಾಗಿದ್ದು, ಭೀಮನ ಅಮಾವಾಸ್ಯೆ ದಿನವಾದ ಇಂದು ಲೋಕಾರ್ಪಣೆ ಮಾಡಲಾಯಿತು.