ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಮಾರಕ ದಾಳಿ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ ತಂಡವನ್ನು 280 ರನ್ ಗಳಿಗೆ ಕಟ್ಟಿ ಹಾಕಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸತತ 2ನೇ ಬಾರಿ ಟಾಸ್ ಗೆದ್ದ ಶ್ರೀಲಂಕಾ ತಂಡ 50 ಓವರ್ ಗಳಲ್ಲ 9 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿತು.
ಲಂಕಾ ಪರ ಮಧ್ಯಮ ಕ್ರಮಾಂಕದಲ್ಲಿ ಚಾರಿತ್ ಅಸ್ಲಾಂಕಾ ಮತ್ತು ಆರಂಭಿಕ ಅವಿಸ್ಕಾ ಫೆರ್ನಾಂಡೊ ತಂಡವನ್ನು ಆಧರಿಸಿದರು. ಚಾರಿತ್ ಅಸ್ಲಾಂಕಾ 68 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 65 ರನ್ ಗಳಿಸಿದರೆ, ಅವಿಸ್ಕಾ ಫೆರ್ನಾಂಡೊ 71 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದರು.
ಅವಿಸ್ಕಾ ಮತ್ತು ಮಿನೋದ್ ಮೊದಲ ವಿಕೆಟ್ ಗೆ 77 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಯಜುರ್ವೆಂದ್ರ ಚಾಹಲ್ ಮಾರಕ ದಾಳಿಗೆ ತತ್ತರಿಸಿ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ಕೆಳ ಕ್ರಮಾಂಕದಲ್ಲಿ ಚಾಮಿಕ ಕರುಣಾರತ್ನೆ 33 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ ಅಜೇಯ 44 ರನ್ ಸಿಡಿಸಿ ತಂಡದ ಮೊತ್ತವನ್ನು ಉಬ್ಬಿಸಿದರು.
ಭಾರತದ ಪರ ಚಾಹಲ್ ಮತ್ತು ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ 2 ವಿಕೆಟ್ ಪಡೆದರು.