ಎಂಆರ್​ಪಿಎಲ್​​ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು : ಆತಂಕದಲ್ಲಿ ರೈತರು

ಮಂಗಳೂರು : ಮಂಗಳೂರಿನ ಸುರತ್ಕಲ್ ಸಮೀಪದ ಸೂರಿಂಜೆ ಮತ್ತು ಕುತ್ತೆತ್ತೂರಿನಲ್ಲಿ ಭತ್ತದ ಬೆಳೆಗೆ ನೇಜಿ ಹಾಕಿದ ಸುಮಾರು ಆರು ಕಳಸೆ ಗದ್ದೆಯ ಬೀಜ ಮೊಳಕೆ ಹಂತದಲ್ಲಿ ಸುಟ್ಟು ಹೋದ ಚಿತ್ರಣ ಬೆಳಕಿಗೆ ಬಂದಿದೆ. ಎಂಆರ್ ಪಿಎಲ್ ನಿಂದ ಹರಿದು ಬಂದ ಕೆಮಿಕಲ್ ಯುಕ್ತ ನೀರು ಇದಕ್ಕೆ ಕಾರಣ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬೊಳ್ಳಾರ ಗುತ್ತಿನ ಪ್ರಕಾಶ್ ಶೆಟ್ಟಿ ಎಂಬುವವರು ಕೃಷಿ ಇಲಾಖೆಯಿಂದ ಪಡೆದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇನ್ನೋರ್ವ ರೈತ ತಾನೇ ಸಿದ್ದಪಡಿಸಿದ ಭತ್ತವನ್ನು ಮೊಳಕೆ ಬರಿಸಿ ಬಿತ್ತಿದ್ದರು. ಇಬ್ಬರು ರೈತರು ಬಿತ್ತಿದ ಬೀಜವೂ ಸುಟ್ಟು ಕಪ್ಪು ಕಪ್ಪಾಗಿ ಹೋಗಿದೆ.

ಎಂಆರ್ ಪಿಎಲ್ ಬಳಿಯ ಮೂಡುಪದವು ಸಮೀಪ ಒಸರುವ ತ್ಯಾಜ್ಯ ನೀರು ಕುತ್ತೆತ್ತೂರು ಮೂಲಕ ಹರಿದು ಸೂರಿಂಜೆಗೆ ಬರುತ್ತದೆ. ಇದರ ಪರಿಣಾಮ ಇಲ್ಲಿ ಕೃಷಿಗೆ ತೊಂದರೆಯಾಗಿ ರೈತರು ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಈಗ ಸೂರಿಂಜೆ ರೈತರು ಮಾಡಿದ ಕೃಷಿ ಯತ್ನ ವಿಫಲವಾಗಿದೆ.

ಇತ್ತೀಚೆಗೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಳದ ಬಳಿ ನೀರಿನಲ್ಲಿ ತೈಲದ ಅಂಶ ಕಂಡು ಬಂದಿದ್ದು, ಮೀನುಗಳು ಸತ್ತಿದ್ದವು. ಇಲ್ಲಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆದರೆ ಅದರ ಫಲಿತಾಂಶ ಇನ್ನೂ ಜನತೆಗೆ ತಿಳಿದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!