ಪ್ರತಿಬಾರಿಯೂ ಚಿಕನ್ ಕಬಾಬ್, ಸಾಂಬಾರ್, ಗ್ರೇವಿ ಮಾಡಿ ಬೇಜಾರ್ ಆಗಿದ್ರೆ ಒಮ್ಮೆ ಈ ರೀತಿ ಚಿಕ್ಕನ್ ಪೆಪ್ಪರ್ ಪ್ರೈ ಮಾಡಿ ನೋಡಿ. ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಬೋನ್ ಲೆಸ್ ಚಿಕನ್ – 500 ಗ್ರಾಂ
ಈರುಳ್ಳಿ – 1 ಮೀಡಿಯಂ ಸೈಜ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಪೆಪ್ಪರ್ ಪೌಡರ್ – 1.5 ಚಮಚ
ಹಸಿ ಮೆಣಸಿನಕಾಯಿ – 2-3
ಕರಿಬೇವು – 10-15 ಎಲೆಗಳು
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆಹಣ್ಣು – ಅರ್ಧ ಹೋಳು
ಅರಿಶಿಣ – ಚಿಟಿಕೆ
ಬೆಳ್ಳುಳ್ಳಿ ಎಸಳು – 5-6
ಎಣ್ಣೆ – 3-4 ಚಮಚ
ಕೊತ್ತಂಬರಿ ಸೊಪ್ಪು ಇದನ್ನೂ ಓದಿ : – ಸಿಂಪಲ್ ಆಗಿ ಚಿಕನ್ ಗ್ರೇವಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ..
ಮೊದಲಿಗೆ ಒಂದು ಬೌಲ್ ಗೆ ತೊಳೆದ ಚಿಕನ್ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಸ್ವಲ್ಪ ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಸಿ ಅರ್ಧ ಮುಕ್ಕಾಲು ಗಂಟೆ ಮ್ಯಾರಿನೇಟ್ ಮಾಡಿ ನೆನಸಿಡಿ. ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಕರಿಬೇವು ಹಾಕಿ ಫ್ರೈ ಮಾಡಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಳಿದ ಕರಿಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
ಈಗ ಮ್ಯಾರಿನೇಟ್ ಮಾಡಿಟ್ಟಿದ್ದ ಚಿಕನ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ. ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಈ ರೀತಿಯಲ್ಲಿ ಚಿಕ್ಕನ್ ಪೆಪ್ಪರ್ ಪ್ರೈ ಮಾಡಿದ್ರೆ ಮೆ ಮಂದಿಯಲ್ಲ ಇಷ್ಟ ಪಟ್ಟು ತಿನ್ನಬಹುದು. ಮತ್ಯಾಕೆ ತಡ ಈಗ್ಲೇ ಟ್ರೈ ಮಾಡಿ.
ಇದನ್ನೂ ಓದಿ : – ಈ ರೀತಿಯಾಗಿ ಮೊಟ್ಟೆ ಬಿರಿಯಾನಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ