ಶಾಸಕ ಎಸ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಸ್ವತಃ ಆಹಾರ ಮತ್ತು ಸಬರಾಜು ಇಲಾಖೆ ಅಧಿಕಾರಿಗಳೇ ಪಡಿತರವನ್ನು ಅಕ್ರಮವಾಗಿ ಸಂಗ್ರಹಿಸಿದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಭಾನುವಾರ ಬೆಳಿಗ್ಗೆ ಆಹಾರ ಮತ್ತು ಸರಬರಾಜು ನಿಗಮದ ಗೋಡಾನ್ ಮೇಲೆ ಶಾಸಕ ಎಸ್. ಸುಬ್ಬಾರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ತಹಸೀಲ್ದಾರ್ ದಿವಾಕರ್ ಕೂಡ ಭಾಗವಹಿಸಿದ್ದರು. ದಾಳಿಯ ವೇಳೆ 45 ಲಕ್ಷ ರೂ.ಗೂ ಅಧಿಕ ಮೌಲ್ಯದ 801 ಕ್ವಿಂಟಾಲ್ ರಾಗಿ 438 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ.
ಬಾಗೇಪಲ್ಲಿ ನಗರದಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಲಾಗಿದ್ದು, ಆಪರೇಟರ್ ಹಜಾರ್ನನ್ನು ವಶಕ್ಕೆ ಪಡೆದ ತಹಸೀಲ್ದಾರ್ ವಶಕ್ಕೆ ಪಡೆದಿದ್ದಾರೆ.