ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆಯನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ನೀರಿನ ಸಂಪ್ ಗೆ ಮುಳುಗಿಸಿ ಸಿಮ್ರಾನ್ (22) ಕೊಲೆ ಮಾಡಲಾಗಿದೆ.
ಮೂರು ತಿಂಗಳ ಹಿಂದೆಯಷ್ಟೇ ಸಿಮ್ರಾನ್ ಅವರನ್ನು ಫೈರೋಜ್ ಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮದುವೆಗೆ ಮೊದಲೇ ಅಕ್ರಮ ಸಂಬಂಧ ಹೊಂದಿದ್ದ ಫೈರೋಜ್ ಮದುವೆ ಆದ ಮೇಲೂ ಮುಂದುವರಿಸಿದ್ದ. ಇದಕ್ಕೆ ಹೆತ್ತವರು ಕೂಡ ಬೆಂಬಲ ನೀಡಿದ್ದರು ಎನ್ನಲಾಗಿದೆ.
ಸಿಮ್ರಾನ್ ಪತಿ ಫೈರೂಜ್ ವಿರುದ್ಧ ಸಿಮ್ರಾನ್ ಕುಟುಂಬದವರು ಕೊಲೆ ಆರೋಪ ಮಾಡಿದ್ದು, ಸಿಮ್ರಾನ್ ಪತಿ ಫೈರೋಜ್, ಅತ್ತೆ, ಮಾವ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸಿಮ್ರಾನ್ ಶವಪರೀಕ್ಷೆ ನಡೆದಿದ್ದು, ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿದೆ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.