ಚೀನಾ ಈಸ್ಟರ್ನ್ ಏರ್ಲೈನ್ಸ್ (600115.SS) ಗೆ ಸೇರಿದ ವಿಮಾನವೊಂದು ದಕ್ಷಿಣ ಚೀನಾದ ಪರ್ವತಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಕುನ್ಮಿಂಗ್ ಎಂಬ ನಗರದಿಂದ ಗುವಾಂಗ್ಝೌಕ್ಕೆ ಸಂಚಾರ ಮಾಡುತ್ತಿದ್ದ ಈ ವಿಮಾನದಲ್ಲಿ ಸುಮಾರು 133 ಪ್ರಯಾಣಿಕರು ಇದ್ದರು. ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737-800 ವಿಮಾನ MU5735 ವುಝೌ ಬಳಿ ಅಪಘಾತಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೇ ವಿಮಾನವಾಗಿದೆ.
ಚೀನಾ ಈಸ್ಟರ್ನ್ ಏರ್ಲೈನ್ಸ್ ಎಂಬುದು ಶಾಂಘೈ ಮೂಲದ ವಿಮಾನಯಾನ ಸಂಸ್ಥೆ. ಚೀನಾದ ಮೂರು ಪ್ರಮುಖ ವಿಮಾನ ಯಾನ ಸ್ಂಸ್ಥೆಗಳಲ್ಲಿ ಇದೂ ಒಂದು. ಈ ವಿಮಾನ ಸಮುದ್ರ ಮಟ್ಟದಿಂದ ಸುಮಾರು 3225 ಅಡಿ ಎತ್ತರದಲ್ಲಿ, 376 ನಾಟ್ ವೇಗದಲ್ಲಿ ಚಲಿಸುತ್ತಿತ್ತು ಎಂದು ಫ್ಲೈಟ್ರಾಡಾರ್ 24 ಎಂಬ ವೆಬ್ಸೈಟ್ ತಿಳಿಸಿದೆ. ಸರಿಯಾಗಿ ಹೋಗಿದ್ದರೆ 3.05ನಿಮಿಷದ ಹೊತ್ತಿಗೆ ಗುವಾಂಗ್ಝೌನಲ್ಲಿ ಲ್ಯಾಂಡ್ ಆಗಬೇಕಿತ್ತು ಎಂದೂ ಮಾಹಿತಿ ನೀಡಿದೆ.